ಅಣ್ಣಿಗೇರಿ: ತಾಲೂಕು ಆಡಳಿತ ತಾಲೂಕ ಪಂಚಾಯಿತಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಪುರಸಭೆ ಇವರ ಸಂಯುಕ್ತ ಆಶ್ರಯದಲ್ಲಿ ಡಾ. ಜಗಜೀವನರಾಮ್ ಅವರ 115ನೇ ಹಾಗೂ ಡಾ. ಬಿ.ಆರ್ ಅಂಬೇಡ್ಕರ್ ಅವರ 131 ನೇ ಜಯಂತೋತ್ಸವ ವನ್ನು ಬಹಳ ವಿಜೃಂಭಣೆಯಿಂದ ಮಾಡಲಾಯಿತು.
ಇನ್ನೂ ವಿವಿಧ ದಲಿತ ಸಂಘಟನೆಗಳಿಂದ ಡಾ. ಬಿ.ಆರ್ ಅಂಬೇಡ್ಕರ್ ಅವರ ಮೂರ್ತಿಯನ್ನು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯನ್ನು ಮಾಡಲಾಯಿತು. ಮೆರವಣಿಗೆಯುದ್ದಕ್ಕೂ ಡಿಜೆ ಹಾಡುಗಳು ಕುಣಿದು ಕುಪ್ಪಳಿಸಿದರು. ಮೆರವಣಿಗೆ ಮುಕ್ತಾಯಗೊಂಡ ನಂತರ ಸ್ಥಳೀಯ ಆಡಳಿತ ವರ್ಗದಿಂದ ಕಾರ್ಯಕ್ರಮ ಜರುಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ದಂಡಾಧಿಕಾರಿ ಮಂಜುನಾಥ ಅಮಾಸೆ ಅವರು ಡಾಕ್ಟರ್ ಜಗಜೀವನರಾಮ್ ಹಾಗೂ ಡಾ ಬಿ ಆರ್ ಅಂಬೇಡ್ಕರ್ ಜಯಂತೋತ್ಸವ ಮಾಡುವುದು ನಮಗೆಲ್ಲರಿಗೆ ಹರುಷ ತಂದಿರುತ್ತದೆ. ಅವರ ಮಾರ್ಗದರ್ಶನದಲ್ಲಿ ನಾವು-ನೀವೆಲ್ಲರೂ ನಡೆದುಕೊಂಡು ಹೋಗಬೇಕೆಂದು ಮಾತನಾಡಿದರು.
ಉಪನ್ಯಾಸಕರಾಗಿ ಆಗಮಿಸಿದ್ದ ಎಫ್.ಎಚ್ ಜಕ್ಕಪ್ಪನವರ್ ಮಾತನಾಡಿ ಒಂದೇ ವೇದಿಕೆಯಲ್ಲಿ ಇಬ್ಬರ ಮಹಾ ನಾಯಕರ ಜಯಂತ್ಯುತ್ಸವ ಆಚರಣೆ ಮಾಡುತ್ತಿರುವುದು ಬಹಳ ಸಂತೋಷದ ವಿಷಯ. ಹಾಗೂ ಪಟ್ಟಣದಲ್ಲಿ ಇಬ್ಬರ ನಾಯಕರ ಮೂರ್ತಿ ಪ್ರತಿಷ್ಠಾಪನೆಗಾಗಿ 2ಲಕ್ಷ ರೂಪಾಯಿಗಳನ್ನು ಕೊಡುವುದಾಗಿ ಘೋಷಣೆ ಮಾಡಿದರು.
ಈ ವೇಳೆ ತಾಲೂಕು ಆಡಳಿತ ವರ್ಗದ ಅಧಿಕಾರಿಗಳು ವಿವಿಧ ದಲಿತ ಪರ ಮುಖಂಡರು ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
Kshetra Samachara
16/04/2022 10:32 am