ನವಲಗುಂದ : ಹೋಳಿ ಹುಣ್ಣಿಮೆಯ ನಂತರ ದಹನವಾದ ಇಷ್ಟಾರ್ಥ ಸಿದ್ಧಿ ಶ್ರೀ ರಾಮಲಿಂಗ ಕಾಮದೇವರು ಯುಗಾದಿಯಂದು ಮರುಹುಟ್ಟು ಪಡೆಯುವ ಮೂಲಕ ಬಾಲ್ಯಾವಸ್ಥೆಯ ಕುಂತ ಭಂಗಿಯಲ್ಲಿ ಯುಗಾದಿ ಪಾಡ್ಯಾದಂದು ಒಂದು ದಿನದ ಮಟ್ಟಿಗೆ ಮರು ಪ್ರತಿಷ್ಟಾಪನೆ ಮಾಡಲಾಗುತ್ತದೆ.
ಇತಿಹಾಸದ ಪ್ರಕಾರ ಶಿವನ ತಪಸ್ಸು ಭಂಗಮಾಡಿ ಶಿವನ ಶಾಪದಿಂದ ಕಾಮ ದಹನವಾದಗ. ಶ್ರೀ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಬೇಡಿಕೊಂಡು ಮನ್ಮಥನಿಗೆ ಮರುಜನ್ಮ ಕೇಳಿದಾಗ ಇಲ್ಲವೆನ್ನದೇ ಶಿವನು ಮನ್ಮಥನನ್ನು ದೇಹ ರೂಪದಲ್ಲಿ ಮರುಸೃಷ್ಠಿ ಮಾಡುತ್ತಾನೆ. ಆದರೆ ಮಾನಸಿಕ ರೂಪದಲ್ಲಿ ಮಾತ್ರ ಕಾಮಣ್ಣ ಸೃಷ್ಟಿಸಲು ಸಾಧ್ಯವೆಂದು ಹೇಳಿದ ಹಿನ್ನೆಲೆಯಲ್ಲಿ ಹೊಸ ವರ್ಷವಾದ ಯುಗಾದಿಯಂದು ಕಾಮಣ್ಣನು ಮರುಜನ್ಮ ಪಡೆದನು. ಈ ಕಾರಣಕ್ಕಾಗಿ ಯುಗಾದಿ ಪಾಡ್ಯಯದಂದು ಕಾಮದೇವರನ್ನು ಪ್ರತಿಷ್ಠಾಪಿಸಲಾಗುತ್ತದೆ.
ಎಪ್ರಿಲ್ 2 ರಂದು ಶನಿವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೇ ಶ್ರೀ ರಾಮಲಿಂಗ ಕಾಮದೇವನ ದರ್ಶನಕ್ಕೆ ಲಭ್ಯವಾಗಿರುತ್ತದೆ. ನಾಳೆ ಕೂಡಾ ಸಾವಿರಾರು ಭಕ್ತರು ನವಲಗುಂದ ರಾಮಲಿಂಗ ಕಾಮಣ್ಣನ ದರ್ಶನಕ್ಕೆ ಬಂದು ಹರಕೆಯನ್ನು ಪಡೆಯುವುದು ಮತ್ತು ಹರಿಕೆ ತೀರಿಸುವುದು ಮಾಡಲಾಗುತ್ತದೆ.
Kshetra Samachara
01/04/2022 10:29 pm