ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತಿರುಪತಿಗೆ ಹೊರಟ ಹುಬ್ಬಳ್ಳಿ 418 ಮಂದಿ: ವೆಂಕಟರಮಣ ಗೋವಿಂದ..ಗೋವಿಂದ...!

ಹುಬ್ಬಳ್ಳಿ: ಬಿಜೆಪಿ ಕಾರ್ಯಕರ್ತರು ಹುಬ್ಬಳ್ಳಿಯಿಂದ ಕಾಶಿಗೆ ಯಾತ್ರೆ ಬೆಳೆಸಿದ ಬೆನ್ನಲ್ಲೇ ಮತ್ತೊಂದು ಯಾತ್ರೆಗೆ ಹುಬ್ಬಳ್ಳಿಯ ಜನರು ಸಿದ್ಧರಾಗಿದ್ದಾರೆ. ಬಿಜೆಪಿ ಮುಖಂಡ ಶಶಿಕಾಂತ ಬಿಜವಾಡ ನೇತೃತ್ವದಲ್ಲಿ ಸುಮಾರು 400 ಜನರು ಹುಬ್ಬಳ್ಳಿಯಿಂದ ತಿರುಪತಿಗೆ ಪ್ರಯಾಣ ಬೆಳೆಸಿದ್ದಾರೆ.

ಬಿಜೆಪಿ ಮುಖಂಡ ಶಶಿಕಾಂತ್ ಬಿಜವಾಡ ಹಾಗೂ ಪಾಲಿಕೆ ನೂತನ ಸದಸ್ಯೆ ದುರ್ಗಮ್ಮ ಬಿಜವಾಡ ದಂಪತಿಯ ನೇತೃತ್ವದಲ್ಲಿ ವೀರಾಪೂರ ಓಣಿ ಹಾಗೂ ಸುತ್ತಮುತ್ತಲಿನ ಬಡಾವಣೆಯ 418 ಜನರು ಹುಬ್ಬಳ್ಳಿಯಿಂದ ತಿರುಪತಿಗೆ ಪ್ರಯಾಣ ಬೆಳೆಸಿದ್ದು, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿರುವ ಯಾತ್ರೆಗೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಚಾಲನೆ ನೀಡಿದರು.

ಇನ್ನೂ ಹುಬ್ಬಳ್ಳಿಯ ರೈಲ್ವೆ ನಿಲ್ದಾಣದಿಂದ 7-30ಕ್ಕೆ ಹೊರಡುವ ಹರಿಪ್ರಿಯಾ ರೈಲಿನ ಮೂಲಕ ಯಾತ್ರಾರ್ಥಿಗಳು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದು, ಎಲ್ಲರೂ ಸುರಕ್ಷಿತವಾಗಿ ದರ್ಶನ ಪಡೆದು ಮರಳಲಿ ಎಂಬುವುದು ನಮ್ಮ ಆಶಯ.

ಮಲ್ಲೇಶ್ ಸೂರಣಗಿ, ಪಬ್ಲಿಕ್ ನೆಕ್ಸ್ಟ್, ಹುಬ್ಬಳ್ಳಿ

Edited By : Nagesh Gaonkar
Kshetra Samachara

Kshetra Samachara

18/03/2022 08:40 pm

Cinque Terre

53.26 K

Cinque Terre

13

ಸಂಬಂಧಿತ ಸುದ್ದಿ