ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕರಿಶಿದ್ದೇಶ್ವರ ದೇಗುಲ ಲೋಕಾರ್ಪಣೆ ಕಾರ್ಯಕ್ರಮ ದಿನಗಣನೆ

ಕುಂದಗೋಳ: ನಂಬಿದವರಿಗೆ ಬೇಡಿದ್ದನ್ನೇ ಕರುಣಿಸುವ ಮಹಾದೈವ ಸಂಶಿ ಜನರ ಬಹು ದಿನಗಳ ಕನಸು ಐತಿಹಾಸಿಕ ಕರಿಸಿದ್ಧೇಶ್ವರ ನೂತನ ದೇಗುಲ ಲೋಕಾರ್ಪಣೆ ಕಾರ್ಯಕ್ರಮ ದಿನ ಗಣನೆ ಆರಂಭವಾಗಿದ್ದು ಸಂಶಿ ಗ್ರಾಮದಲ್ಲಿ ಅತಿ ಸಂಭ್ರಮದ ವಾತಾವರಣ ನಿರ್ಮಾಣಗೊಂಡಿದೆ.

ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿ ಭಕ್ತರು ಸಹಕಾರದಿಂದ ನೂತನವಾಗಿ ನಿರ್ಮಿಸಲಾಗಿರುವ ನೂತನ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದ ಹೊಳಪು ಕಳೆದ ಫೆ.1 ರಿಂದ ಫೆ.6 ರವರೆಗೆ ಗ್ರಾಮದಲ್ಲಿ ಸಂತಸದ ಪರಿಸರ ಸೃಷ್ಟಿಸಿದ್ದು, ಈಗಾಗಲೇ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಭಕ್ತರಿಂದ ದೇಣಿಗೆ ರೂಪದಲ್ಲಿ ದವಸ ಧಾನ್ಯ, ಅಡುಗೆ ಪದಾರ್ಥ ಸಾಮಗ್ರಿ, ರೊಟ್ಟಿ ಸೇರಿದಂತೆ ನಾನಾ ರೂಪದ ಸಹಕಾರ ಜನರಿಂದ ಒದಗಿದೆ.

ಸಂಶಿ ಗ್ರಾಮದಲ್ಲಿ ನಡೆಯುತ್ತಿರುವ ಕರಿಶಿದ್ದೇಶ್ವರ ದೇವಸ್ಥಾನದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸಂಶಿ ಲಕ್ಷ್ಮೇಶ್ವರ ಮಾರ್ಗದ ಬಂಡಿ ಉತ್ಸವ, ಗಳಗನಾಥ ದೇವಸ್ಥಾನದಲ್ಲಿರುವ ಏಳು ನದಿಗಳ ಸಂಗಮದಲ್ಲಿ ಸಕಲ ವಾದ್ಯ ಮೇಳದೊಂದಿಗೆ ಹೊಳಿ ಪೂಜೆ, ಕರಿಶಿದ್ದೇಶ್ವರ ದೇವರ ಮೂರ್ತಿ ಪ್ರತಿಷ್ಠಾಪನೆ, ಕಳಸಾ ರೋಹನ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಸರಳ ಮತ್ತು ಸಂಕ್ಷಿಪ್ತವಾಗಿ ಕೋವಿಡ್ ಮಾರ್ಗಸೂಚಿ ಪ್ರಕಾರ ನೆರವೇರಲಿವೆ.

Edited By : Manjunath H D
Kshetra Samachara

Kshetra Samachara

04/02/2022 05:25 pm

Cinque Terre

38.79 K

Cinque Terre

0

ಸಂಬಂಧಿತ ಸುದ್ದಿ