ಕುಂದಗೋಳ : ಪಟ್ಟಣದ ರೈತರ ಆರಾಧ್ಯ ದೇವತೆ ಪವಾಡರೂಪಿಣಿ ಗಾಳಿ ಮರೆಮ್ಮದೇವಿಗೆ ಇಂದು ಮಹಾನವಮಿ ನಿಮಿತ್ತವಾಗಿ ವಿಶೇಷ ಪೂಜಾ ಕಾರ್ಯಕ್ರಮದ ಜೊತೆಗೆ ಮಹಾಪ್ರಸಾದ ದ ಸೇವೆ ಕುಂದಗೋಳ ಪಟ್ಟಣದ ಸಕಲ ಭಕ್ತಾಧಿಗಳಿಂದ ಏರ್ಪಟ್ಟಿತು.
ಅರಳಿ ಮರದಲ್ಲಿ ನೂರೊಂದು ಜೇನುಗೂಡುಗಳ ಕೆಳಗೆ ಮಹಾಮಂಟಪದ ದೇವಸ್ಥಾನದದಲ್ಲಿ ನೆಲೆಸಿದ ಗಾಳಿ ಮರೆಮ್ಮದೇವಿ ಭಕ್ತ ಸಂಕುಲದ ರೈತರು ರೋಗಿಗಳು ಗರ್ಭಿಣಿ ಬಾಣಂತಿಯರು ಸೇರಿದಂತೆ ಪ್ರತಿಯೊಬ್ಬರ ಕಷ್ಟ ಪರಿಹರಿಸಿ ಇಷ್ಟಾರ್ಥ ಸಿದ್ಧಿಸುವಂತೆ ಮಾಡುತ್ತಾ ಬಂದಿದ್ದಾಳೆ, ಆ ತಾಯಿಗೆ ನವರಾತ್ರಿ ಅಂಗವಾಗಿ ನಿತ್ಯವು ಪೂಜೆ ಸಲ್ಲತ್ತಲಿದ್ದು ಇಂದು ಭಕ್ತರು ತನು ಮನ ಧನದ ಸೇವೆ ಸಮರ್ಪಿಸಿ ಮಹಾಪ್ರಸಾದ ಮಾಡಿದರು.
ಹುಬ್ಬಳ್ಳಿ ಲಕ್ಷ್ಮೇಶ್ವರ ರಾಜ್ಯ ಹೆದ್ದಾರಿಯ ಪ್ರಯಾಣಿಕರು ಸೇರಿದಂತೆ ಕುಂದಗೋಳ ಪಟ್ಟಣದ ನಾಗರೀಕರು ಮಹಿಳೆಯರು ದೇವಿಯ ದರ್ಶನ ಪಡೆದು ಪ್ರಸಾದ ಸವಿದು ಪುನೀತರಾದರು.
Kshetra Samachara
14/10/2021 06:12 pm