ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಭಕ್ತಿ, ಸಂಭ್ರಮದ ನಾಗರ ಪಂಚಮಿ ಆಚರಣೆ

ಕಲಘಟಗಿ: ನಾಗರ ಪಂಚಮಿ ಹಬ್ಬವನ್ನು ಕಲಘಟಗಿ ತಾಲೂಕಿನಾದ್ಯಂತ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.

ಬೆಳಿಗ್ಗೆಯಿಂದಲೇ ಹಬ್ಬದ ಸಡಗರ ಮನೆ ಮಾಡಿತ್ತು ದೇವಸ್ಥಾನಗಳಲ್ಲಿ ಮಹಿಳೆಯರು ಕುಟುಂಬದವರು ನಾಗರಕಲ್ಲು ,ಹುತ್ತಗಳಿಗೆ ಹಾಗೂ ಮಣ್ಣಿನ ತಯಾರಿಸಿದ ನಾಗರಾಜನಿಗೆ ಹಾಲೆರೆದು ಪೂಜೆಯನ್ನು ಸಲ್ಲಿಸಿ ಪಂಚಮಿ ಆಚರಿಸಿದರು.

ಮಹಿಳೆಯರು ರೊಟ್ಟಿ ಪಂಚಮಿಗೆ ರೊಟ್ಟಿ, ಚಪಾತಿ,ಕಡ್ಲೇಕಾಳು ಉಸುಳಿ,ಬದನೆಕಾಯಿ, ಎಣ್ಣೆಗಾಯಿ ಪಲ್ಯ, ತಂಬಿಟ್ಟು,ಶೇಂಗಾ, ಕಡ್ಲೆಚಟ್ನಿ ಸೇರಿದಂತೆ ಬಗೆ,ಬಗೆಯ ಪಕ್ಷಗಳನ್ನು ಸಿದ್ದಮಾಡಿ ಬಂಧು,ಬಳಗ ನೆರೆ ಹೊರೆಯವರಿಗೆ ಹಂಚಿ ಸಂಭ್ರಮಿಸುವುದು ಹಬ್ಬದ ವಿಶೇಷವಾಗಿದೆ.

ನಾಗರ ಪಂಚಮಿಗೆಂದು ಪುಟಾಣಿ,ಗೋಧಿ,ಬುಂದೆ,ಶೇಂಗಾ,ಎಳ್ಳು ಬಗೆ ಬಗೆಯ ಲಾಡುಗಳನ್ನು ತಯಾರಿಸಿ ನೈವೇದ್ಯ ಮಾಡವ ವಾಡಿಕೆ.ನಾಗ ಪಂಚಮಿಗೆ ಹಬ್ಬಕ್ಕೆ ತವರು ಮನೆಗೆ ಬಂದ ಸಹೋದರಿಯರು

ಹಾಲೆರೆದು ಜೋಕಾಲಿ ಆಡಿ ಸಂಭ್ರಮಿಸಿದರು.

Edited By : Nagesh Gaonkar
Kshetra Samachara

Kshetra Samachara

12/08/2021 09:42 pm

Cinque Terre

24.95 K

Cinque Terre

0

ಸಂಬಂಧಿತ ಸುದ್ದಿ