ಹುಬ್ಬಳ್ಳಿ: ಶ್ರಾವಣ ಮಾಸದ ಅಂಗವಾಗಿ ಶ್ರೀ ಕ್ಷೇತ್ರ ಬೂದನಗುಡ್ಡದಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಬಸವಣ್ಣ ದೇವರಿಗೆ ನಿರಂತರ ಅಭಿಷೇಕ ನಡೆಯಲಿದೆ ಎಂದು ಶ್ರೀ ಕ್ಷೇತ್ರ ಬೂದನಗುಡ್ಡ ಬಸವಣ್ಣ ದೇವಸ್ಥಾನ ಸಮಿತಿಯ ಉಪಾಧ್ಯಕ್ಷ ಈರಪ್ಪ ಎಮ್ಮಿ ಹೇಳಿದರು.
ಕೋವಿಡ್- 19 ರ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ ಹಾಗೂ ಸರ್ಕಾರದ ನಿರ್ದೇಶನದ ಮಾರ್ಗಚೂಚಿಯಂತೆ ಅಗಸ್ಟ್ 9 ರಿಂದ ಅಗಸ್ಟ್ 30 ರವರೆಗೆ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಮಾಡಲಾಗುತ್ತಿದೆ. ಈ ವೇಳೆ ಭಕ್ತರು ಕಡ್ಡಾಯವಾಗಿ ಮಾಸ್ಕ್, ಸಾಮಾಜಿಕ ಅಂತರ ಕಾಪಾಡಿಕೊಂಡು ದೇವರ ದರ್ಶನವನ್ನು ಮಾಡಬೇಕು ಎಂದರು.
ಇನ್ನು, ಸೇವೆ, ಪ್ರಸಾದ, ಅನ್ನಸಂತರ್ಪಣೆ, ಕಾಯಿ ಅಂಗಡಿ, ಆಟಿಕೆ ಅಂಗಡಿ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಸಭೆ ಸಮಾರಂಭಗಳನ್ನು ಕಡ್ಡಾಯವಾಗಿ ಸ್ಥಗಿತಗೊಳಿಸಿದೆ. ದೇವರ ಫಲ್ಲಕ್ಕಿ ತರುವ ಭಕ್ತಾದಿಗಳು ದೇವರ ದರ್ಶನ ಮಾಡಿಕೊಂಡು ದೇವಸ್ಥಾನದಲ್ಲಿ ಕೋವಿಡ್ ಮಾರ್ಗಸೂಚಿ ಉಲ್ಲಂಘನೆ ಮಾಡದೇ ಸಹಕರಿಸುವಂತೆ ತಿಳಿಸಿದರು.
Kshetra Samachara
07/08/2021 12:19 pm