ಹುಬ್ಬಳ್ಳಿ: ನಗರದ ದೇವಾಂಗಪೇಟೆಯ ಶ್ರೀ ವೀರಭದ್ರೇಶ್ವರ ದೇವರ ೩೪ನೇ ಅಗ್ನಿ ಉತ್ಸವವು ಕಳೆದ ನಾಲ್ಕು ದಿನಗಳಿಂದ ಅದ್ಧೂರಿಯಾಗಿ ಜರುಗಿತು. ಕೊನೆಯ ದಿನವಾದ ಇಂದು ಸಂಜೆ ಸುಳ್ಳದ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಆಶೀರ್ವಚನ ನೀಡಲಿದ್ದಾರೆ.
ಶ್ರೀಗಳ ಆಶೀರ್ವಚನದ ನಂತರ ಪುರಾಣಿಕರಿಗೆ ಮತ್ತು ದಾನಿಗಳಿಗೆ ಸತ್ಕಾರ ಸಮಾರಂಭ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
Kshetra Samachara
27/02/2021 03:22 pm