ಅಣ್ಣಿಗೇರಿ : ಪಟ್ಟಣದ ಆರಾಧ್ಯ ದೈವ ಶ್ರೀ ಅಮೃತೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಸೋಮವಾರ ಮತ್ತು ಮಂಗಳವಾರ ಜರುಗಲಿವೆ.
ದೇವಸ್ಥಾನದ ಆವರಣದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಅಮೃತೇಶ್ವರನಿಗೆ ಜಾತ್ರಾ ಹಿಂದಿನ ದಿನ ಅಂದರೆ ಇಂದು ರಾತ್ರಿ ಕಲ್ಯಾಣೊತ್ಸವ ಜರುಗವದು.
ನಾಳೆ ಅಂದರೆ ಮಂಗಳವಾರ ಬೆಳಗಿನ ಜಾವ ಶ್ರೀ ಅಮೃತೇಶ್ವರನಿಗೆ ಬೆಳಿಗ್ಗೆಯಿಂದಲೆ ಪೂಜೆ ಕೈಂಕರ್ಯಗಳು ಜರುಗಲಿವೆ.
ಸಾಯಂಕಾಲದ ಹೊತ್ತಿಗೆ ದೇವಸ್ಥಾನದ ಟ್ರಸ್ಟ್ ವತಿಯಿಂದ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಸಂಕ್ಷಿಪ್ತವಾಗಿ ರಥೋತ್ಸವವಕ್ಕೆ ಚಾಲನೆ ನೀಡಲಾಗುವದು.
ದೇವಸ್ಥಾನಕ್ಕೆ ಬರುವ ಭಕ್ತಾಧಿಗಳು ಕಡ್ಡಾಯವಾಗಿ ಮಾಸ್ಕ ಧರಿಸಿಕೊಂಡು ಬರಬೇಕು ಎಂದು ಜಾತ್ರಾ ಕಮೀಟಿ ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
ಪಟ್ಟಣದಲ್ಲಿ ಜರುಗಲಿರುವ ಶ್ರೀ ಅಮೃತೇಶ್ವರ ಜಾತ್ರಾ ನಿಮಿತ್ತ ದೇವಸ್ಥಾನಕ್ಕೆ ಹೂಗಳಿಂದ ಮತ್ತು ಸಣ್ಣ ಸಣ್ಣ ಲೈಟಗಳಿಂದ ಅಲಂಕಾರ ಮಾಡಿ ಮದುವೆ ಮಂಟಪದಲ್ಲಿರುವ ಮದುಮಗಳಂತೆ ಶೃಂಗರಿಸಲಾಗಿದೆ.
ದೇವಸ್ಥಾನ ಇಂದು ನೋಡಿಗರ ಕಣ್ಣಿಗೆ ಬಹು ಆನಂದಮಯವಾಗಿದೆ. ಕೋವಿಡ್ ನಿಮಿತ್ತ ಈ ಭಾರಿ ಜಾತ್ರೆ ಸರಳವಾಗಿ ನಡೆಯುತ್ತಿರುವುದು ಭಕ್ತರಲ್ಲಿ ಬೇಜಾರದ ಸಂಗತಿಯಾಗಿದೆ ಎಂದು ಸ್ಥಳೀಯರು ಪಬ್ಲಿಕ್ ನೆಕ್ಸ್ಟ್ ಗೆ ತಿಳಿಸಿದ್ದಾರೆ.
Kshetra Samachara
28/12/2020 05:19 pm