ಕಲಘಟಗಿ: ಪಟ್ಟಣದಲ್ಲಿನ ಹಜರತ್ ಮೆಹಬೂಬಸುಬಾನಿ ಉರುಸ್ ಶುಕ್ರವಾರ ರಾತ್ರಿ ಸಂಪನ್ನಗೊಂಡಿತು.
ಪಟ್ಟಣದ ಹಾಗೂ ಸುತ್ತಲಿನ ಗ್ರಾಮಗಳ ಹಿಂದೂ,ಮುಸ್ಲಿಂ ಬಾಂಧವರು ಉರುಸ್ ಗೆ ಆಗಮಿಸಿ ಭಕ್ತಿಯನ್ನು ಸಮರ್ಪಿಸಿದರು.
ಉರುಸ್ ದಿನದಂದು ದರ್ಗಾದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಪ್ರಾರ್ಥನೆ ಹಮ್ಮಿಕೊಳ್ಳಲಾಗಿತ್ತು.
ಬಂದ ಭಕ್ತರಿಗೆ ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಉರುಸ್ ನ ಅಂಗವಾಗಿ ವಿದ್ಯುತ್ ದೀಪಗಳು,ಹೂವಿನಿಂದ ದರ್ಗಾವನ್ನು ಅಲಂಕರಿಸಲಾಗಿತ್ತು.
Kshetra Samachara
28/11/2020 05:05 pm