ಧಾರವಾಡ: ಧಾರವಾಡ ಜಿಲ್ಲೆಯ ಏಳು ತಾಲೂಕುಗಳ ಆಯ್ದ ಗ್ರಾಮಗಳಲ್ಲಿ ಸೆಪ್ಟೆಂಬರ್ 17ರ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಸೆಪ್ಟೆಂಬರ್ 17 ರಂದು ಧಾರವಾಡ ತಾಲೂಕಿನ ಮಂಡಿಹಾಳ, ಹುಬ್ಬಳ್ಳಿ ಗ್ರಾಮೀಣ ತಾಲೂಕಿನ ಚವರಗುಡ್ಡ, ಕಲಘಟಗಿ ತಾಲೂಕಿನ ಜುಂಜನಬೈಲ, ನವಲಗುಂದ ತಾಲೂಕಿನ ಅಳಗವಾಡಿ, ಅಣ್ಣಿಗೇರಿ ತಾಲೂಕಿನ ಬೆನ್ನೂರ, ಅಳ್ನಾವರ ತಾಲೂಕಿನ ಕಡಬಗಟ್ಟಿ, ಕುಂದಗೋಳ ತಾಲೂಕಿನ ರಟ್ಟಿಗೇರಿ ಗ್ರಾಮಗಳಲ್ಲಿ ಆಯಾ ತಾಲೂಕಿನ ತಹಶೀಲ್ದಾರರು ಕಾರ್ಯಕ್ರಮ ನಡೆಸುವರು.
ತಾಲೂಕಿನ ತಹಶೀಲ್ದಾರೊಂದಿಗೆ ಎಲ್ಲ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ಯೋಜನೆ ಹಾಗೂ ಅಗತ್ಯ ಮಾಹಿತಿಯೊಂದಿಗೆ ಖುದ್ದಾಗಿ ಹಾಜರಿದ್ದು ಸಾರ್ವಜನಿಕರ ಅಹವಾಲು, ಬೇಡಿಕೆಗಳಿಗೆ ಸ್ಥಳದಲ್ಲಿಯೇ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಕಾರ್ಯಸೂಚಿಗಳ ಅನ್ವಯ ಪೂರ್ಣಗೊಳಿಸಿ, ಸಂಬಂಧಿಸಿದ ಫಲಾನುಭವಿಗಳಿಗೆ ಪರಿಹಾರ ನೀಡಲು ಕ್ರಮವಹಿಸಬೇಕು. ಅಂದು ಮುಖ್ಯ ಕಾರ್ಯದರ್ಶಿಗಳ ವೀಡಿಯೋ ಸಂವಾದ ಸಭೆ ಇರುವುದರಿಂದ ತಾವು ಸಭೆಯ ನಂತರ ಒಂದು ತಾಲೂಕಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
15/09/2022 07:23 pm