ಹುಬ್ಬಳ್ಳಿ: ಪ್ಲಾಸ್ಟಿಕ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕೆ ಹೊರತು ವ್ಯಾಪಾರಸ್ಥರಿಗೆ ಯಾವುದೇ ರೀತಿಯ ದೌರ್ಜನ್ಯ ಮಾಡಬಾರದು. ಏಕೆಂದರೆ ಈಗ ತಾನೆ ಕೊರೊನಾದಿಂದ ವ್ಯಾಪಾರಿಗಳು ಸುಧಾರಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏಕ ಬಳಕೆಯ ಪ್ಲಾಸ್ಟಿಕ್ ತಯಾರಿಸುವ ಕಂಪನಿಗಳನ್ನು ಬ್ಯಾನ್ ಮಾಡಿ. ಜನರಲ್ಲಿ ಜಾಗೃತಿ ಅವಶ್ಯಕವಾಗಿದೆ. ಸಮಯ ನಿಗದಿ ಮಾಡಿದರೆ ಅಷ್ಟರಲ್ಲಿ ಸಂಪೂರ್ಣ ಪ್ಲಾಸ್ಟಿಕ್ ಬ್ಯಾನ್ ಮಾಡುವ ತೀರ್ಮಾನವನ್ನು ಸ್ವತಃ ಪಡೆಯಬೇಕು. ಬೇರೆ ರಾಜ್ಯದಿಂದ ಬರುವ ಪ್ಲಾಸ್ಟಿಕ್ ಬಳಸಬೇಡಿ. ಅಧಿಕಾರಿಗಳು ಮೂಲ ಪ್ಲಾಸ್ಟಿಕ್ ಬಳಕೆ ಮಾಡುವರನ್ನು ಹಿಡಿದು ದಂಡ ಹಾಕಬೇಕು. ಆದರೆ ಸಣ್ಣ ವ್ಯಾಪಾರಿಗಳಿಗೆ ಹಾಗೂ ಹೋಟೆಲ್ ಮೇಲೆ ಹೊರೆ ಮಾಡಬೇಡಿ ಎಂದು ಪಾಲಿಕೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
Kshetra Samachara
06/08/2022 10:57 pm