ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪಟ್ಟಣ ಪಂಚಾಯಿತಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹಗ್ಗಜಗ್ಗಾಟ

ಕಲಘಟಗಿ: ಕಲಘಟಗಿ ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಇಂದು ಪಟ್ಟಣ ಪಂಚಾಯತ್ ನಲ್ಲಿ ಸಭೆ ನಡೆಸಲಾಗಿತ್ತು. ಸಭೆಯಲ್ಲಿ ಪಟ್ಟಣ ಪಂಚಾಯಿತಿ 17 ಸದಸ್ಯರುಗಳು ಹಾಗೂ ಶಾಸಕರು ಹಾಜರಿದ್ದು ಅಧ್ಯಕ್ಷ ಸ್ಥಾನಕ್ಕೆ ಅನಸೂಯ ಹೆಬ್ಬಳ್ಳಿಮಠರವರು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

ಸಭೆಯಲ್ಲಿ ಅನಸೂಯ ಹೆಬ್ಬಳ್ಳಿಮಠರವರ ಪರವಾಗಿ ಕಾಂಗ್ರೆಸ್ ಪಕ್ಷದ 3 ಸದಸ್ಯರು ಹಾಗೂ ಜೆಡಿಎಸ್ ಪಕ್ಷದ 2 ಸದಸ್ಯರುಗಳು ಹಾಗೂ ಬಿಜೆಪಿ 1 ಸದಸ್ಯ ಬೆಂಬಲ ಸೂಚಿಸಿದ್ದಾರೆ. ಬಿಜೆಪಿಯ 10 ಸದಸ್ಯರುಗಳು ಒಂದು ಕಡೆ ವಿಶ್ವಾಸ ಮತ ಸೂಚಿಸಿದ್ದು ಸಭೆ ಅತಂತ್ರ ಸ್ಥಿತಿಯಲ್ಲಿ ಅಂತ್ಯಗೊಂಡಿದೆ. ಸಾಯಂಕಾಲದವರೆಗೂ ಮುಂದಿನ ಬದಲಾವಣೆ ಏನಾಗಬಹುದು ಕಾದು ನೋಡಬೇಕಾಗಿದೆ.

ಉದಯ ಗೌಡರ, ಪಬ್ಲಿಕ್ ನೆಕ್ಸ್ಟ್, ಕಲಘಟಗಿ

Edited By : Nagesh Gaonkar
Kshetra Samachara

Kshetra Samachara

25/07/2022 04:23 pm

Cinque Terre

11.86 K

Cinque Terre

0

ಸಂಬಂಧಿತ ಸುದ್ದಿ