ಹುಬ್ಬಳ್ಳಿ: ಕೇಂದ್ರ ಸರ್ಕಾರದಿಂದ ಇಂದು 13 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಲೋಕಾರ್ಪಣೆ ಮಾಡಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿಂದು ರಸ್ತೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಗಬ್ಬೂರ ಬೈಪಾಸ್‌ನಿಂದ ಧಾರವಾಡ ನರೇಂದ್ರದವರೆಗಿನ ರಸ್ತೆ ನಿರ್ಮಾಣದಲ್ಲಿ ರಸ್ತೆ ಅಗಲಿಕರಣಕ್ಕೆ ಬಹಳ ತಾಂತ್ರಿಕ ತೊಂದರೆ ಎದುರಾಗಿತ್ತು. ಆದರೆ ಪ್ರಹ್ಲಾದ್ ಜೋಶಿ ಅವರ ಒತ್ತಾಯಕ್ಕೆ ಮಂಜೂರು ಮಾಡಿದ್ದೇವೆ. ಹುಬ್ಬಳ್ಳಿಯ ಫ್ಲೈ ಓವರ್ ಕಾಮಗಾರಿ ಶ್ರೇಯಸ್ಸು ಕೂಡ ಜೋಶಿ ಅವರಿಗೆ ಸಲ್ಲಬೇಕು ಎಂದರು.
ಅಲ್ಲದೇ ಸಿಎಂ ನೀಡಿದ ಕೆಲ ಯೋಜನೆಗಳಿಗೆ ವೇದಿಕೆಯಲ್ಲೆ ಮಂಜೂರು ಮಾಡುವುದಾಗಿ ನಿತಿನ್ ಗಡ್ಕರಿ ಘೋಷಣೆ ಮಾಡಿದರು. ಈ ವೇಳೆ ಇಲ್ಲಿ ಬಂದು ನೀವು ಇವರ ಕೆಲಸ ಮಾಡ್ತೀರಿ, ನಮ್ಮದು ಮಾಡಿ ಎಂದ ಖರ್ಗೆ ಅವರಿಗೆ ನೀವು ಕೂಡ ಮನವಿ ಸಲ್ಲಿಸಿ ನಾನು ಖುದ್ದು ಮಂಜೂರಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ನಮ್ಮ ಕಾಲದಲ್ಲಿ ಭಾರತದ ರಸ್ತೆಗಳನ್ನು ಅಮೆರಿಕ ರಸ್ತೆಗಳ ರೀತಿಯಲ್ಲಿ ಮಾಡುತ್ತೇವೆ. ನಮ್ಮಲ್ಲಿ ಹಣಕಾಸಿನ ತೊಂದರೆಯಿಲ್ಲ. ಖರ್ಗೆ ಅವರಿಗೂ ನಾನು ವಚನ ನೀಡುತ್ತೇನೆ. ಅವರ ಕ್ಷೇತ್ರಕ್ಕೂ 5 ಸಾವಿರ ಕೋಟಿ ರೂ. ವೆಚ್ಚದ ಕಾಮಗಾರಿ ನೀಡುತ್ತೇನೆ. ನಾನೇ ಖುದ್ದು ಕಲಬುರಿಗಿಗೆ ಬಂದು ಶಿಲನ್ಯಾಸ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
28/02/2022 08:23 pm