ಹುಬ್ಬಳ್ಳಿ: ಕೇಂದ್ರ ಸರ್ಕಾರ ಈಗಾಗಲೇ ಕೆಲ ಸಂಸ್ಥೆಗಳನ್ನು ಖಾಸಗೀಕರಣ ಮಾಡಿದೆ. ಅದೇ ರೀತಿ ಮುಂದಿನ ದಿನಗಳಲ್ಲಿ ಎಲ್ಲವನ್ನು ಖಾಸಗೀಕರಣ ಮಾಡುತ್ತದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಕೇಂದ್ರ ಸರ್ಕಾರದ ಕಿಡಿ ಕಾರಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶ ಕೇವಲ ಹತ್ತು ಜನರಿಂದ ನಡೆಯುತ್ತಿದೆ. ಇವರಿಗೆ ಜನ ಸೇವೆ ಮಾಡುವುದನ್ನು ಬಿಟ್ಟು ಅಧಿಕಾರದ ಆಸೆಯಲ್ಲಿ ಬಿದ್ದಿದ್ದಾರೆ. ಹೀಗೆ ಸಂಸ್ಥೆಗಳನ್ನು ಖಾಸಗೀಕರಣ ಮಾಡುತ್ತಾ ಹೊರಟರೆ. ಮುಂದಿನ ದಿನಗಳಲ್ಲಿ ಆರೋಗ್ಯವನ್ನು ಸಹ ಖಾಸಗೀಕರಣ ಮಾಡಿ ಎಲ್ಲರ ಜೀವನದಲ್ಲಿ ಆಟ ಆಡುತ್ತಾರೆ. ಆದ ಕಾರಣ ಇದೆಲ್ಲಾ ಜನರಿಗೆ ತಿಳಿಯಬೇಕು ಎಂದರು.
Kshetra Samachara
08/08/2021 05:35 pm