ಧಾರವಾಡ: ಸಚಿವರಾದ ಬಳಿಕ ನಿನ್ನೆ ಮೊದಲ ಬಾರಿಗೆ ಧಾರವಾಡಕ್ಕೆ ಆಗಮಿಸಿದ ಶಂಕರ ಪಾಟೀಲ ಮುನೇನಕೊಪ್ಪ ಅವರ ಸ್ವಾಗತಕ್ಕಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ನಿತಿನ್ ಇಂಡಿ ಎಂಬುವವರು ಹಾಕಿದ್ದ ಬ್ಯಾನರ್‌ನ್ನು ಅರವಿಂದ ಬೆಲ್ಲದ ಅಭಿಮಾನಿಯೊಬ್ಬರು ಹರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಅರವಿಂದ ಬೆಲ್ಲದ ಅವರು ಶಾಸಕರಷ್ಟೇ ಅಲ್ಲ. ಅವರು ಧಾರವಾಡ ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷರು. ಜಿಲ್ಲಾಧ್ಯಕ್ಷರು ಯಾರು ಎಂದೇ ಗೊತ್ತಿಲ್ಲದಂತಹ ಈ ವ್ಯಕ್ತಿಗಳು ಬ್ಯಾನರ್ ಏಕೆ ಹಾಕುತ್ತಾರೆ? ಪಕ್ಷದ ಚೌಕಟ್ಟಿನಲ್ಲಿ ಹೇಗಿರಬೇಕು ಎಂಬುದು ಇವರಿಗೆ ಗೊತ್ತಿಲ್ಲವೇ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಂತರ ಸ್ಥಳಕ್ಕೆ ಬಂದ ಪೊಲೀಸರು ಬ್ಯಾನರ್ ಹರಿಯಲು ನಿಮಗೆ ಅಧಿಕಾರ ಕೊಟ್ಟವರಾರು? ಏನೇ ಅಸಮಾಧಾನ ಇದ್ದರೂ ಅದನ್ನು ಪ್ರತಿಭಟನೆ ಮೂಲಕ ವ್ಯಕ್ತಪಡಿಸಿ. ಈ ರೀತಿ ಬ್ಯಾನರ್ ಹರಿದು ಹಾಕುವುದು ಉಪಾದ್ಯಾಪಿತನವಾಗುತ್ತದೆ. ಪೊಲೀಸ್ ಠಾಣೆಗೆ ಬಂದು ಇದಕ್ಕೆ ಉತ್ತರ ನೀಡಿ ಎಂದು ಬೆಲ್ಲದ ಅಭಿಮಾನಿಗೆ ಸೂಚಿಸಿದರು.
ಟೋಲನಾಕಾದಲ್ಲಿಯೂ ಸಹ ಇವರೇ ಬ್ಯಾನರ್ ಹರಿದು ಹಾಕಿದ್ದು ಎಂಬುದು ಗೊತ್ತಾಗಿದೆ.
Kshetra Samachara
08/08/2021 11:20 am