ಹುಬ್ಬಳ್ಳಿ- ಸಚಿವರಾದ ಸಿ.ಸಿ.ಪಾಟೀಲ, ಹಾಗೂ ಮುರುಗೇಶ ನಿರಾಣಿ ಅವರು ವೈಯಕ್ತಿಕ ಸ್ವಾರ್ಥಗೋಸ್ಕರ ಪಂಚಮಸಾಲಿ ಸಮಾಜವನ್ನು 2 ಎ ವರ್ಗಕ್ಕೆ ಸೇರ್ಪಡೆ ಹೋರಾಟದಿಂದ, ಹಿಂದೆ ಸರಿದಿದ್ದಾರೆ ಎಂದು ಪಂಚಮಸಾಲಿ ಸಮಾಜದ ಮುಖಂಡ ಗಂಗಾಧರ ದೊಡ್ಡವಾಡ ಹಾಗೂ ವಿರೂಪಾಕ್ಷ ಕಳ್ಳೀಮನಿ ಹೇಳಿದರು.
ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ 27 ವರ್ಷಗಳಿಂದ ಹೋರಾಟ ನಡೆಯುತ್ತಿದೆ. ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾವೇಶ ಕಾಂಗ್ರೆಸ್ ಪ್ರಾಯೋಜಿತ ಎಂಬ ನಿರಾಣಿ ಹೇಳಿಕೆ ಸತ್ಯಕ್ಕೆ ದೂರವಾಗಿದೆ. ಇದು ಸಮಾಜದ ಸಮಾವೇಶ ಹಾಗೂ ಕೆಲಸವಾಗಿದೆ. ಯಾವುದೇ ಪಕ್ಷಕ್ಕೆ ಅನುಕೂಲ ಆಗಲೆಂದು ನಾವು ಹೋರಾಡುತ್ತಿಲ್ಲ ಎಂದು ತಿಳಿಸಿದರು.
ಹೆಚ್ಚಿನ ಮೀಸಲಾತಿ ದೊರೆತರೆ, ನಮ್ಮ ಯುವಕ-ಯುವತಿಯರಿಗೆ ಅನುಕೂಲ ಆಗುತ್ತದೆ. ಅದಕ್ಕಾಗಿ ನಾವು ಶ್ರಮಿಸುತ್ತಿದ್ದೇವೆ. ಈ ನಿಟ್ಟಿನಲ್ಲಿ ವರದಿ ನೀಡುವಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದಷ್ಟು ಬೇಗ ವರದಿ ಪಡೆದು ಸಮಾಜಕ್ಕೆ ನೆರವಾಗುವ ಕೆಲಸವನ್ನು ಸಚಿವರಾದ ನಿರಾಣಿ ಹಾಗೂ ಸಿ.ಸಿ. ಪಾಟೀಲ ಮಾಡಬೇಕು’ ಇಲ್ಲದಿದ್ದರೆ ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸುವುದು ನಮ್ಮ ಗುರಿ ಎಂದರು....
Kshetra Samachara
24/02/2021 12:23 pm