ಕಲಘಟಗಿ: ತಾಲೂಕಿನ ಮಡಕಿಹೊನ್ನಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ ಜರುಗಿದೆ.
ಶನಿವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಮಹಾದೇವಪ್ಪ ಮುಡೆಕ್ಕನವರ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ತಿಪ್ಪವ್ವ ಪೂಜಾರ ಅವಿರೋಧವಾಗಿ ಆಯ್ಕೆಯಾದರು. ಈ ಸಂಧರ್ಭದಲ್ಲಿ ಬಿ.ಜೆ.ಪಿ. ಯುವ ನಾಯಕರಾದ ಶಶಿಧರ ನಿಂಬಣ್ಣವರ, ಗ್ರಾಮದ ಹಿರಿಯರಾದ ಎನ್.ಕೆ.ಕೂಬಿಹಾಳ, ಬಸವರಾಜ ಆಲದಕಟ್ಟಿ, ಮಲ್ಲೆಶಪ್ಪ ಜಾವೂರ, ನಿಂಗಪ್ಪ ಪರವಾಪುರ, ಕಲ್ಮೇಶ ಗಾಡದ ಹಾಗೂ ಗ್ರಾಮದ ಹಿರಿಯರು ಯುವಕರು ಉಪಸ್ಥಿತರಿದ್ದರು.
Kshetra Samachara
06/02/2021 08:16 pm