ಧಾರವಾಡ: ಧಾರವಾಡದ ಇಟಿಗಟ್ಟಿ ಕ್ರಾಸ್ ಬಳಿ ಮೊನ್ನೆ ಅಪಘಾತವಾದಾಗ ಮೋದಿ ಅವರು ಮೃತರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು. ಈಗ ಅದೇ ರೀತಿ ನರೇಂದ್ರ ಟೋಲಗೇಟ್ ನಿಂದ ಗಬ್ಬೂರು ಕ್ರಾಸ್ ವರೆಗಿನ ಹೆದ್ದಾರಿಯನ್ನು ಅಗಲೀಕರಣ ಮಾಡಿಸುವುದಾಗಿ ಟ್ವೀಟ್ ಮಾಡಿ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ರಾಜ್ಯ ಉಪಾಧ್ಯಕ್ಷ ಇಮ್ರಾನ್ ಕಳ್ಳಿಮನಿ ಆಗ್ರಹಿಸಿದರು.
ಸೋಮವಾರ ನರೇಂದ್ರ ಟೋಲಗೇಟ್ ಬಳಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿದ ಅವರು, ಪ್ರಹ್ಲಾದ ಜೋಶಿ ಅವರು ನರೇಂದ್ರ ಮೋದಿ ಅವರಿಗೆ ಆಪ್ತರಾಗಿದ್ದಾರೆ. ಜೋಶಿ ಅವರಿಗೆ ಇಲ್ಲಿಯ ಸಮಸ್ಯೆ ಗೊತ್ತು. ಕೂಡಲೇ ಈ ಸಮಸ್ಯೆಯನ್ನು ಮೋದಿ ಅವರ ಗಮನಕ್ಕೆ ತರಬೇಕು. ಈ ಭಾಗದ ಶಾಸಕರು, ಸಂಸದರು ಕೂಡಲೇ ಈ ರಸ್ತೆ ಅಗಲೀಕರಣ ಮಾಡಿಸುವ ಸಂಬಂಧ ಮೋದಿ ಮೇಲೆ ಒತ್ತಡ ತರಬೇಕು. ಖೇಣಿ ಅವರೊಂದಿಗೆ ಮಾತನಾಡಿ 24 ಗಂಟೆಯಲ್ಲಿ ರಸ್ತೆ ಅಗಲೀಕರಣ ಮಾಡಿಸುವ ಸಂಬಂಧ ಮೋದಿ ಅವರು ಟ್ವೀಟ್ ಮಾಡಬೇಕು ಎಂದು ಒತ್ತಾಯಿಸಿದರು.
Kshetra Samachara
18/01/2021 03:01 pm