ಹುಬ್ಬಳ್ಳಿ: ಸಚಿವ ಸಂಪುಟ ವಿಸ್ತರಣೆಯಾಗುತ್ತಿದಂತೆ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಹೊಗೆಯಾಡುತ್ತಿದೆ. ಮಂತ್ರಿ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಒಂದು ಗುಂಪು ಅಸಮಾಧಾನಗೊಂಡರೆ ಪಕ್ಷ ತ್ಯಜಿಸಿ ಬಂದು ಸರ್ಕಾರ ಬರಲು ಕಾರಣರಾದ ನಮ್ಮನ್ನು ತುಳಿಯಲಾಗುತ್ತಿದೆ ಎಂದು ಮಿತ್ರಮಂಡಳಿ ಕೆಂಡಕಾರುತ್ತಿದೆ.
ಹೌದು,,, ಅಸಮಾಧಾನವನ್ನು ತಣ್ಣಗೆ ಮಾಡುವ ಹೊಣೆಯನ್ನು ರಮೇಶ ಜಾರಕಿಹೊಳಿ ಹಾಗೂ ಜಗದೀಶ್ ಶೆಟ್ಟರ್ ಹೆಗಲಿಗೆ ಬಿಜೆಪಿ ಹೈಕಮಾಂಡ್ ಹಾಕಿದೆ ಎನ್ನಲಾಗಿದೆ. ಇದಕ್ಕಾಗಿ ಇಂದು ಹುಬ್ಬಳ್ಳಿಗೆ ದೌಡಾಯಿಸಿದ ರಮೇಶ ಜಾರಕಿಹೊಳಿ ತರಾತುರಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ನಗರದ ಖಾಸಗಿ ಹೊಟೇಲ್ ನಲ್ಲಿ ಉಭಯ ಸಚಿವರು ಮಾತುಕತೆ ನಡೆಸಿದರು. ಪಕ್ಷದ ಬಂಡಾಯ ಎದ್ದಿರುವ ಶಾಸಕರನ್ನು ಮನವೊಲಿಸುವ ಕುರಿತಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದ್ದು, ಈ ಇಬ್ಬರು ಸಚಿವರ ಭೇಟಿ ಭಾರಿ ಕುತೂಹಲ ಮೂಡಿಸಿದೆ...
Kshetra Samachara
15/01/2021 05:47 pm