ಹುಬ್ಬಳ್ಳಿ: ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಲೌಡ್ ಸ್ಪೀಕರ್ ಬಳಕೆ ವಿರುದ್ಧ ಮತ್ತೆ ಸಮರ ಸಾರಿರುವ ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಜೂನ್ 8ರಿಂದ ಶಾಸಕರ ಕಚೇರಿ ಮುಂದೆ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ನಮ್ಮ ದೇವಸ್ಥಾನಗಳ ಸುಪ್ರಭಾತಗಳನ್ನು ಬಂದ್ ಮಾಡಿಸಲು ಬರುತ್ತದೆ. ಸುಪ್ರಭಾತ ಹಾಕದಂತೆ ನಮಗೆ ಧಮ್ಕಿ ಹಾಕುತ್ತಾರೆ. ಸರ್ಕಾರದ ಸೊಕ್ಕು ಅಡಗಿಸುವವರೆಗೆ ನಮ್ಮ ಹೋರಾಟ ಮುಂದುವರೆಯುತ್ತದೆ. ಸುಪ್ರೀಂ ಕೋರ್ಟ್ ಆದೇಶ ಪಾಲನೆ ಮಾಡದವರ ಮೇಲೆ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಕಾನೂನು ಪಾಲನೆ ಜಾರಿಗೆ ತರುವಷ್ಟು ಸರ್ಕಾರಕ್ಕೆ ಧಮ್ ಇಲ್ವಾ? ನಿಮಗೆ ಸರ್ಕಾರ ನಡೆಸಲು ಆಗದಿದ್ದರೆ ನನ್ನ ಕೈಗೆ ಕೊಡಿ. ಹೇಗೆ ಸರ್ಕಾರ ನಡೆಸಬೇಕು ಎಂಬುದನ್ನು ತೋರಿಸಿ ಕೊಡ್ತೀನಿ. ಸುಪ್ರೀಂ ಕೋರ್ಟ್ ಆದೇಶ ಪಾಲಿಸದೇ ಇರುವವರ ಮೇಲೆ ಗುಂಡು ಹೊಡಿತೀನಿ ಎಂದು ಮುತಾಲಿಕ್ ಗುಡುಗಿದ್ದಾರೆ.
ಕಾಶ್ಮೀರದಲ್ಲಿ 375 ನೇ ವಿಧಿ ರದ್ದು ಮಾಡಿ ಕೇಂದ್ರ ಸರ್ಕಾರ ಆಡಳಿತ ಮಾಡುತ್ತಿದ್ದರು ಸಹಿತ ಅಲ್ಲಿ ಹಿಂದೂಗಳ ಮಾರಣ ಹೋಮವಾಗುತ್ತಿವೆ. ಕಳೆದ ತಿಂಗಳಲ್ಲಿ 7 ಜನರ ಕೊಲೆಯಾಗಿದೆ. ಹಿಂದೂಗಳ ಕೊಲೆಯಾಗುತ್ತಿರುವುದು ನೋವಿನ ಸಂಗತಿ. ಕೇಂದ್ರ ಸರ್ಕಾರ ಏನ ಮಾಡ್ತಿದೆ. ಕಣ್ಮುಚ್ಚಿ ಕುಳ್ತಿದ್ದಿರಾ ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ.
ಬಿಜೆಪಿ ಏನು ನಿಮ್ಮಪ್ಪನದು ಅಲ್ಲ. ನಾವು ಅದಕ್ಕಾಗಿ ರಕ್ತ ಸುರಿಸಿ ಪಕ್ಷ ಕಟ್ಟಿದ್ದೇವೆ. ರಾಜಕೀಯದ ಬಗ್ಗೆ ಈಗ ಹೆಚ್ಚು ಮಾತನಾಡೋದಿಲ್ಲ. ನಮ್ಮ ಶ್ರಮದಿಂದ ನೀವು ಅಧಿಕಾರ ನಡೆಸುತ್ತಿದ್ದೀರಿ ಎಂದು ಮುತಾಲಿಕ್ ರಾಜ್ಯ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/06/2022 03:09 pm