ಧಾರವಾಡ: ಧಾರವಾಡದ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಮೇ 15ರಂದು ಚನ್ನಬಸವೇಶ್ವರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದ ಬ್ಯಾನರ್‌ಗಳಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಭಾವಚಿತ್ರ ಹಾಕಿಲ್ಲ ಎಂದು ವಿನಯ ಬೆಂಬಲಿಗರು ದೇವಸ್ಥಾನ ಆಡಳಿತ ಮಂಡಳಿವರಿಗೆ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿದೆ.
ದೇವಸ್ಥಾನದಲ್ಲಿ ಜಮಾಯಿಸಿದ ವಿನಯ ಕುಲಕರ್ಣಿ ಅಭಿಮಾನಿಗಳು ಬ್ಯಾನರ್‌ಗಳಲ್ಲಿ ತಮ್ಮ ನಾಯಕನ ಭಾವಚಿತ್ರ ಯಾಕೆ ಹಾಕಿಲ್ಲ ಎಂದು ಪ್ರತಿಭಟನೆ ನಡೆಸಿದರು. ವಿನಯ ಕುಲಕರ್ಣಿ ಹಾಗೂ ಅವರ ಕುಟುಂಬ ಈ ದೇವಸ್ಥಾನಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಆದರೆ ಯಾಕೆ ಅವರ ಭಾವಚಿತ್ರ ಬ್ಯಾನರ್ ನಲ್ಲಿ ಹಾಕಿಲ್ಲ ಎಂದು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ಆಡಳಿತ ಮಂಡಳಿ ಪ್ರತಿಭಟನೆಗೆ ಮಣಿದು ಬ್ಯಾನರ್‌ಗಳಲ್ಲಿ ವಿನಯ ಕುಲಕರ್ಣಿ ಭಾವಚಿತ್ರ ಹಾಕುವುದಾಗಿ ಹೇಳಿದ್ದಾರೆ.
Kshetra Samachara
11/05/2022 05:26 pm