ಹುಬ್ಬಳ್ಳಿ: ಸುಪ್ರೀಂ ಕೋರ್ಟ್ ಹೊರಡಿಸಿದ ಶಬ್ದ ಮಾಲಿನ್ಯ ನಿಲ್ಲಿಸುವ ಆಜ್ಞೆ ಕಟ್ಟುನಿಟ್ಟಾಗಿ ಜಾರಿಯಾಗಬೇಕೆಂದು ಒತ್ತಾಯಿಸಿ, ಅಕ್ಟೋಬರ್ 7 ರಂದು ರಾಜ್ಯದ ಪ್ರತಿ ತಾಲೂಕು ಕೇಂದ್ರಗಳಲ್ಲಿ ಶ್ರೀರಾಮ ಸೇನಾ ಸಂಘಟನೆಯಿಂದ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ಶ್ರೀರಾಮ ಸೇನಾ ಕರ್ನಾಟಕದ ಮುಖ್ಯಸ್ಥ ಪ್ರಮೋದ ಮುತಾಲಿಕ್ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ಏರ್ಪಡಿಸಿ ಮಾತನಾಡಿದ ಅವರು, ಕಳೆದ 21 ವರ್ಷಗಳ ಹಿಂದೆಯೇ ಸರ್ವೋಚ್ಚ ನ್ಯಾಯಾಲಯ ಶಬ್ದ ಮಾಲಿನ್ಯ ನಿಲ್ಲಿಸಲು ಆಜ್ಞೆ ಮಾಡಿ, ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಲೌಡ್ ಸ್ವೀಕರ್ ಉಪಯೋಗಿಸಬಾರದು ಎಂಬ ನಿಯಮ ಮಾಡಿದೆ. ಆಸ್ಪತ್ರೆ, ಶಿಕ್ಷಣ ಸಂಸ್ಥೆ, ದೇವಾಲಯ, ಮಸೀದಿ, ಚರ್ಚ್, ಕೋರ್ಟ್, ಸರ್ಕಾರಿ ಕಚೇರಿ, ಜನವಸತಿ ಪ್ರವೇಶ ಇವು ನಿಶಬ್ದ ವಲಯ ಎಂದು ಘೋಷಣೆ ಮಾಡಿದೆ ಆದರೆ ಸರ್ಕಾರ, ರಾಜಕಾರಣಿಗಳು, ಪೋಲಿಸ್ ಇಲಾಖೆಯ ನಿರ್ಲಕ್ಷ್ಯದಿಂದ ದಿನೇ ದಿನೇ ಶಬ್ದ ಮಾಲಿನ್ಯ ಹೆಚ್ಚಾಗುತ್ತಿದ್ದು, ನಿದ್ದೆ, ವಿಶ್ರಾಂತಿ, ಓದು, ಧ್ಯಾನ, ಜಪ ಇತ್ಯಾದಿ ಸಂವಿಧಾನ ಕೊಟ್ಟ ಸ್ವಾತಂತ್ರಗಳಿದ್ದರೂ ಮಾನವಹಕ್ಕು ಹಾಗೂ ಸಂವಿಧಾನದ ಉಲ್ಲಂಘನೆಯಾಗುತ್ತಿದೆ. ಈ ವಿಷಯವನ್ನು ಶ್ರೀರಾಮ ಸೇನಾ ಗಂಭೀರವಾಗಿ ಪರಿಗಣಿಸಿದ್ದು, ಶಬ್ದ ಮಾಲಿನ್ಯ ತಡೆಯಲು ಆಂಧೋಲನ ಹಮ್ಮಿಕೊಂಡಿದ್ದೇವೆ ಎಂದರು.
Kshetra Samachara
30/09/2021 01:09 pm