ಹುಬ್ಬಳ್ಳಿ: ಇಂದು ಸಿಎಂ ಬಸವರಾಜ ಬೊಮ್ಮಾಯಿ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಹಿನ್ನೆಲೆಯಲ್ಲಿ, ಮಹಿಳೆಯೊಬ್ಬಳು ತಮ್ಮ ಕಷ್ಟದ ಬಗ್ಗೆ ಮನವಿ ಸಲ್ಲಿಸಲು ಬಂದಾಗ ಮೂರ್ಛೆ ಬಿದ್ದಿದ್ದಾಳೆ.
ನಗರದ ಗೋಕುಲ ರಸ್ತೆ ಗಾಂಧಿನಗರ ನಿವಾಸಿ ಭಾರತಿ ಎಂಬುವರ ಮಗ ಅನಾರೋಗ್ಯದಿಂದ ಬಳಲುತ್ತಿದ್ದು, ಆತನನ್ನು ಧಾರವಾಡದ ಎಸ್‌ಡಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಒಬ್ಬನೇ ಮಗನಿದ್ದು, ನಾವು ಆರ್ಥಿಕವಾಗಿ ಬಡವರಿದ್ದು, ಹಣಕಾಸಿನ ಸಹಾಯ ಮಾಡಿ ಎಂದು ಕೋರಿ, ಸಿಎಂ ಬಳಿ ಅಳಲು ತೋಡಿಕೊಳ್ಳಲು ಮಹಿಳೆ ಬಂದಿದ್ದರು. ಸಿಎಂ ಅವರು ಕಾರು ಹತ್ತಿ ಹೋಗುತ್ತಿದ್ದಂತೆ ಮಹಿಳೆಯು ನಿತ್ರಾಣಗೊಂಡು ಕುಸಿದು ಬಿದ್ದರು.
ಸ್ಥಳದಲ್ಲಿದ್ದ ಮಹಿಳಾ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತೆ ರಾಜಶ್ರೀ ಜಡಿ ಅವರು ನೀರು ಕುಡಿಸಿ ಉಪಚರಿಸಿದರು. ನಂತರ ಪೊಲೀಸರು ತಮ್ಮ ಜೀಪಿನಲ್ಲಿ ಮಹಿಳೆ ಕರೆದುಕೊಂಡು ಮನೆಗೆ ತಲುಪಿಸಿದರು.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/08/2022 02:40 pm