ಧಾರವಾಡ: ಈ ದೇಶಕ್ಕೆ ಸಂವಿಧಾನವನ್ನು ಸಮರ್ಪಿಸಿದ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ನಾವು ಬಿಚ್ಚಿಡುವುದಕ್ಕಿಂತ ಬಚ್ಚಿಟ್ಟ ವಿಷಯಗಳೇ ಹೆಚ್ಚು ಎಂದು ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ಧಾರವಾಡದ ರಂಗಾಯಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂವಿಧಾನ ಸಮರ್ಪಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಈ ದೇಶದ ಕೇಂದ್ರ ಬಿಂದು ಸಂವಿಧಾನವೇ ಆಗಿದೆ. ಅದರ ಸುತ್ತ ನಾವು ಬದುಕು ಕಟ್ಟಿಕೊಂಡಿದ್ದೇವೆ. ಬಾಬಾ ಸಾಹೇಬರು ಈ ದೇಶಕ್ಕೆ ನೀಡಿದ ಸಂವಿಧಾನ ಕೇವಲ ಒಂದು ಪುಸ್ತಕವಲ್ಲ. ಅದೊಂದು ದೊಡ್ಡ ಶಕ್ತಿ. ಅಂಬೇಡ್ಕರ್ ಅವರನ್ನು ಎಲ್ಲರೂ ಅಧ್ಯಯನ ಮಾಡಬೇಕು. ಅಧ್ಯಯನ ಮಾಡಿದ್ದೇ ಆದಲ್ಲಿ ಅವರು ನಮ್ಮ ಮುಂದೆ ಹಿಮಾಲಯ ಪರ್ವತದಂತೆ ನಿಲ್ಲುತ್ತಾರೆ ಎಂದರು.
ತಕ್ಷಣಕ್ಕೆ ನಮಗೆ ಯಾವುದೇ ವಿಷಯದಲ್ಲಿ ಫಲಿತಾಂಶ ಸಿಗುವುದಿಲ್ಲ. ಆ ಫಲಿತಾಂಶ ನಮ್ಮ ಮುಂದಿನ ಯುವ ಪೀಳಿಗೆಗೆ ಸಿಗುತ್ತದೆ. ಅಂಬೇಡ್ಕರ್ ಅವರ ಕಾಲದಲ್ಲಿ ಅವರ ಮಹತ್ವ ಅಂದಿನ ಜನರಿಗೆ ಗೊತ್ತಾಗಲಿಲ್ಲ. ಇಂದು ನಾವೆಲ್ಲ ಅಂಬೇಡ್ಕರ್ ಅವರನ್ನು ಗೌರವಿಸುತ್ತಿದ್ದೇವೆ. ಇನ್ನೂ ಮುಂದೆ ಹೋದಂತೆ ದೊಡ್ಡಮಟ್ಟದಲ್ಲಿ ಅಂಬೇಡ್ಕರ್ ಅವರು ಗೌರವಿಸಲ್ಪಡುತ್ತಾರೆ ಎಂದರು.
ರಂಗಾಯಣದ ನಿರ್ದೇಶಕ ರಮೇಶ ಪರವಿನಾಯ್ಕರ್, ಸಾಹಿತಿ ಬಾಳಣ್ಣ ಶೀಗಿಹಳ್ಳಿ, ರಂಗಸಮಾಜದ ಸಿದ್ಧರಾಮ ಹಿಪ್ಪರಗಿ, ನಿವೃತ್ತ ಶಿಕ್ಷಕ ಕೆ.ಎಚ್.ನಾಯಕ ಕಾರ್ಯಕ್ರಮದಲ್ಲಿದ್ದರು.
Kshetra Samachara
30/11/2020 04:37 pm