ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ಈಗ ಶಾಸಕನಿದ್ದೇನೆ ಆ ಜವಾಬ್ದಾರಿ ನಿಭಾಯಿಸುತ್ತೇನೆ

ಧಾರವಾಡ: ಪಕ್ಷದ ನಾಯಕರು ಹಾಗೂ ವರಿಷ್ಠರು ಹೇಳದೇ ಕೇಳದೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಈಗ ನಾನು ಶಾಸಕನಿದ್ದೇನೆ ಆ ಕೆಲಸವನ್ನು ನಿಭಾಯಿಸುತ್ತೇನೆ ಎಂದು ಶಾಸಕ ಅರವಿಂದ ಬೆಲ್ಲದ ಅವರು, ಸಚಿವ ಸಂಪುಟ ಸೇರ್ಪಡೆಯಾಗುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.

ಸದ್ಯ ಪಕ್ಷದ ಜಿಲ್ಲಾಧ್ಯಕ್ಷ ಹಾಗೂ ಶಾಸಕನಿದ್ದೇನೆ ಜವಾಬ್ದಾರಿ ನಿಭಾಯಿಸುತ್ತೇನೆ ಎಂದರು.

ಇನ್ನು ಆಶ್ರಯ ಬಡಾವಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಹಿಂದೆ ಆಶ್ರಯ ಬಡಾವಣೆಯಲ್ಲಿ ಫಲಾನುಭವಿಗಳಿಗೆ ಜಾಗ ಮಂಜೂರು ಮಾಡಿಸಲಾಗಿತ್ತು. ಆ ಅವಧಿಯಲ್ಲಿ ಯಾವ ಫಲಾನುಭವಿಗಳು ಮನೆ ಕಟ್ಟಿಸಿಕೊಂಡಿಲ್ಲವೋ ಅವರು ಮನೆ ಕಟ್ಟಿಸಿಕೊಳ್ಳಬೇಕು ಎಂದು ಪಾಲಿಕೆ ವತಿಯಿಂದ ನೋಟಿಸ್ ಹೊರಡಿಸಲಾಗಿತ್ತು. ಇಲ್ಲವೇ ಆ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದೂ ತಿಳಿಸಲಾಗಿತ್ತು. ಆಗ ಯಾರು ಮನೆ ಕಟ್ಟಿಸಿಕೊಂಡಿರಲಿಲ್ಲವೋ ಅಂತವರ ಜಾಗವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈಗ ಅದು ಸರ್ಕಾರಿ ಜಾಗ ಆಗಿರುವುದರಿಂದ ಅಲ್ಲಿ ಕೆಲವೊಂದಿಷ್ಟು ಜನ ರಿಯಲ್ ಎಸ್ಟೇಟ್ ಮಾಡುವ ಜನ ಕೆಲವರಿಗೆ ದುಡ್ಡು ಕೊಟ್ಟು ಮನೆ ಹಾಕಿಸಿದ್ದಾರೆ. ಈ ಬಗ್ಗೆ ನಾಳೆ ಡಿಸಿ ಹಾಗೂ ಪಾಲಿಕೆ ಆಯುಕ್ತರೊಂದಿಗೆ ಸಭೆ ಮಾಡಲಾಗುತ್ತಿದೆ ಎಂದರು.

Edited By : Nagesh Gaonkar
Kshetra Samachara

Kshetra Samachara

24/11/2020 08:38 pm

Cinque Terre

36.8 K

Cinque Terre

3

ಸಂಬಂಧಿತ ಸುದ್ದಿ