ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಪತ್ರಿಕಾ ದಿನಾಚರಣೆ

ಅಣ್ಣಿಗೇರಿ: ಪ್ರತಿ ವರ್ಷ ಜುಲೈ 1 ರಂದು ನಮ್ಮ ರಾಜ್ಯದಲ್ಲಿ ಪತ್ರಿಕಾ ದಿನ ಆಚರಿಸಲಾಗುತ್ತದೆ. ಅದರಂತೆ ಪಟ್ಟಣದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಪತ್ರಿಕಾ ದಿನಾಚರಣೆ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ಪಟ್ಟಣದ ಗಣ್ಯರು ಜ್ಯೋತಿ ಬೆಳಗಿಸುವುದರ ಮುಖಾಂತರ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಣ್ಣಿಗೇರಿ ಪೊಲೀಸ್ ಠಾಣೆಯ ಪಿ ಎಸ್ ಐ ಜೂಲಕಟ್ಟಿ ಅವರು ಯುವ ಪತ್ರಕರ್ತರ ಉದ್ದೇಶಿಸಿ ಮಾತನಾಡಿ ನಿಮ್ಮ ಬರವಣಿಗೆಯಲ್ಲಿ ಒಂದು ಕಾರ್ಯಕ್ರಮದ ಅಡಿಯಲ್ಲಿ ಬರೆಯುವಾಗ ಆ ಕಾರ್ಯಕ್ರಮದ ಉದ್ದೇಶ ಅದರ ಹಿಂದೆ ಶ್ರಮ ಯಾವ ತರ ಇದೆ ಮುಂದೆ ಸಮಾಜಕ್ಕೆ ಯಾವ ರೀತಿ ಸಂದೇಶ ಕೊಡುತ್ತದೆ ಎಂಬುದರ ಬಗ್ಗೆ ಬರೆಯಬೇಕು.ಬರೆಯುವಾಗ ಸೃಜನಶೀಲತೆ,ಹೊಸತನ ಇರಬೇಕು ಎಂದು ಮಾತನಾಡಿದರು.

ಅಣ್ಣಿಗೇರಿ ಪಟ್ಟಣ ಹಾಗೂ ನೂತನ ತಾಲೂಕು ಬೆಳೆಯಲು ಪತ್ರಕರ್ತರ ಪರಿಶ್ರಮ ಸೇವೆ ಬಹಳ ದೊಡ್ಡದಾಗಿದೆ ಎಂದು ಗಣ್ಯರಾದ ಷಣ್ಮುಖ ಗುರಿಕಾರ ಅವರು ಮಾತನಾಡಿದರು.ಮತ್ತೊಬ್ಬ ಪಟ್ಟಣದ ಗಣ್ಯರಾದ ಶಿವಶಂಕರ್ ಕಲ್ಲೂರು ಅವರು ಮಾತನಾಡಿ ಪತ್ರಕರ್ತರಿಗೆ ಹಾಗು ವಿತರಕರಿಗೆ ಸರಕಾರದಿಂದ ಸಹಾಯಧನ ಸಿಗಬೇಕಾಗಿದೆ. ಮಳೆ ಚಳಿಯೆನ್ನದೆ ತಮ್ಮ ಒಂದು ದಿನ ವಿಶ್ರಾಂತಿ ಇಲ್ಲದೆ ಕಾರ್ಯಗಳನ್ನು ನಿರ್ವಹಣೆ ಮಾಡುತ್ತಿದ್ದಾರೆ ಎಂದು ಮಾತನಾಡಿದರು.

ಪ್ರಕಾಶ್ ಅಂಗಡಿ ಅವರು ಮಾತನಾಡಿ ಪತ್ರಿಕಾರಂಗ ದೇಶದ ವ್ಯವಸ್ಥೆಯನ್ನು ಬದಲು ಮಾಡುವ ಶಕ್ತಿ ಹೊಂದಿದೆ. ದೇಶದ ಅಂಕುಡೊಂಕುಗಳನ್ನು ತಿದ್ದುವ ವ್ಯವಸ್ಥೆಯಲ್ಲಿ ಪತ್ರಿಕಾರಂಗ ಇದೆಯೆಂದು ಮಾತನಾಡಿದರು. ಈ ವೇಳೆ ಬಾಪೂಜಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಪತ್ರಕರ್ತರ ಸಂಘಕ್ಕೆ ಕ್ರೀಡಾ ಸಾಮಗ್ರಿಗಳನ್ನು ಬುಡ್ಡ ಸಾಬ್ ಬೆಟಗೇರಿಯವರು ವಿತರಿಸಿದರು.

ಇದೇ ವೇಳೆ ವೈದ್ಯರ ದಿನಾಚರಣೆಯ ಅಂಗವಾಗಿ ಪಟ್ಟಣದ ಡಾಕ್ಟರ್ ರಮೇಶ್ ಅಕ್ಕಿ ಅವರಿಗೆ ಸನ್ಮಾನ ಮಾಡಲಾಯಿತು. ಹಾಗೂ ಕಾರ್ಯಕ್ರಮದಲ್ಲಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಗೆ ಸಂಘದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನ ಮಾಡಿ ಗೌರವಿಸಲಾಯಿತು.

ಈ ವೇಳೆ ಪುರಸಭೆಯ ಮುಖ್ಯಾಧಿಕಾರಿ ಮಾಂತೇಶ್ ನಿಡುವಣಿ, ಪುರಸಭೆಯ ನಾಮ ಸದಸ್ಯರು ರಾಘವೇಂದ್ರ ರಾಮಗಿರಿ, ಕಸಾಪ ಅಧ್ಯಕ್ಷ ರವಿರಾಜ್ ವರ್ಣೇಕರ್,ಸದಸ್ಯರಾದ ಎ ಪಿ ಗುರಿಕಾರ್, ವೀರೇಶ್ ಕುಬಸದ, ಬಸವರಾಜ್ ಕುಬಸದ, ಮುಳುಗುಂದ, ಅನ್ವರ್ ಹುಬ್ಬಳ್ಳಿ, ಮಂಜುನಾಥ್ ತಿಗಡಿ,ಗಿರಡ್ಡಿ,ವೀರೇಶ್ ಶಾನಭೋಗರ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

Edited By : PublicNext Desk
Kshetra Samachara

Kshetra Samachara

02/07/2022 08:56 am

Cinque Terre

12.8 K

Cinque Terre

0

ಸಂಬಂಧಿತ ಸುದ್ದಿ