ಧಾರವಾಡ: ಧಾರವಾಡ ತಾಲೂಕಿನ ಮನಸೂರಿನವರಾದ ದಿ.ಪಂ. ಮಲ್ಲಿಕಾರ್ಜುನ ಮನಸೂರ ಅವರ ಪತ್ರ ಪಂ.ರಾಜಶೇಖರ ಮನಸೂರ ಅವರು ನಿನ್ನೆ ವಿಧಿವಶರಾಗಿದ್ದಾರೆ. 1942 ರ ಡಿ. 16 ರಂದು ಇವರು ಜನಿಸಿದ್ದರು.
ಮನೆಯಲ್ಲಿ ಸದಾ ಸಂಗೀತದ ವಾತಾವರಣ ಇತ್ತು. ಹೀಗಾಗಿ ಸಹಜವಾಗಿಯೇ ಹಿಂದೂಸ್ಥಾನಿ ಸಂಗೀತದ ಅನೇಕ ರಾಗಗಳು ರಾಜಶೇಖರ ಅವರ ಮನಸ್ಸು, ಮಿದುಳು ಪ್ರವೇಶಿಸಿದ್ದವು. ಹೀಗೆ ಬಾಲ್ಯದಿಂದಲೇ ರಾಜಶೇಖರ ಅವರಿಗೆ ಸಂಗೀತ ಸಂಸ್ಕಾರ ಲಭಿಸಿತ್ತು.
ಪಂ.ರಾಜಶೇಖರ ಮನಸೂರ ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಹಾಗೂ ಇಂಗ್ಲೆಂಡ್‌ನಿಂದ ಸಂಶೋಧನಾ ಪದವಿ ಪಡೆದು ಸುಮಾರು 35 ವರ್ಷಗಳ ಕಾಲ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದರು. ಅನೇಕ ಸಂಶೋಧನಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿಯೂ ಕಾರ್ಯನಿರ್ವಹಿಸಿ ನಿವೃತ್ತರಾಗಿದ್ದರು. ನಿವೃತ್ತಿಯ ನಂತರ ಅವರು ಬೆಂಗಳೂರಿನಲ್ಲಿಯೇ ನೆಲೆಸಿದ್ದರು.
ಪಂ.ರಾಜಶೇಖರ ಮನಸೂರ ಅವರಿಗೆ ಅನೇಕ ಪ್ರಶಸ್ತಿಗಳು ಸಂದಿವೆ. ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಕಲಾ ಸಿರಿ ಗೌರವ, ಕರ್ನಾಟಕ ರಾಜೋತ್ಸವ ಪ್ರಶಸ್ತಿಗಳು ಸಂದಿವೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/05/2022 09:09 am