ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಕಸಾಪ ವತಿಯಿಂದ ಭಾವಜೀವಿ ಸಮನ್ವಯ ಕವಿಗೆ ಭಾವಪೂರ್ಣ ಶ್ರದ್ಧಾಂಜಲಿ

ಅಣ್ಣಿಗೇರಿ: ಮಾರುತಿ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭಾವಜೀವಿ ಸಮನ್ವಯ ಕವಿ ಎಂದೆ ಹೆಸರಾಗಿರುವ ನಾಡೋಜ ಡಾಕ್ಟರ್ ಚನ್ನವೀರ ಕಣವಿ ಅವರ ನಿಧನ ಪ್ರಯುಕ್ತ ಭಾವಪೂರ್ಣ ಶ್ರದ್ಧಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮ ನಡೆಸಲಾಯಿತು.

ಒಬ್ಬ ಸರಳ ಸಜ್ಜನಿಕೆಯ ಕವಿಯನ್ನು ಕಳೆದುಕೊಂಡ ಈ ನಾಡು ಬಡವಾಗಿದೆ. ಮರಣೋತ್ತರವಾದರ ಅವರಿಗೆ ರಾಷ್ಟ್ರಕವಿ ಎಂದು ಘೋಷಣೆ ಆಗಬೇಕೆಂದು ಸರ್ಕಾರಕ್ಕೆ ಒತ್ತಾಯಿಸುವುದಾಗಿ ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷರಾದ ಷಣ್ಮುಖ ಗುರಿಕಾರ್ ಅವರು ಸರ್ಕಾರಕ್ಕೆ ಒತ್ತಾಯಿಸುವುದಾಗಿ ಹೇಳಿದರು.

ತಾಲೂಕು ಕಸಾಪ ಅಧ್ಯಕ್ಷರು ರವಿರಾಜ ಮಾತನಾಡಿ ನಾಡೋಜ ಅವರ ನಿಧನ ವಾರ್ತೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ದಿಗ್ಭ್ರಮೆ ಮೂಡಿಸಿದೆ ಆದರೆ ವಿಧಿಯಾಟ ಬಲ್ಲವರ್ಯಾರು ಅವರ ಆತ್ಮಕ್ಕೆ ಚಿರಶಾಂತಿ ನೀಡಲಿ ಎಂದು ಪ್ರಾರ್ಥಿಸಿದರು.

ಈ ವೇಳೆ ಕಸಾಪ ತಾಲೂಕು ಪದಾಧಿಕಾರಿಗಳು ಪಟ್ಟಣದ ಗಣ್ಯರು ಸಾಹಿತ್ಯ ಅಭಿಮಾನಿಗಳು ಶಿಕ್ಷಕರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

19/02/2022 01:23 pm

Cinque Terre

4.17 K

Cinque Terre

0

ಸಂಬಂಧಿತ ಸುದ್ದಿ