ಧಾರವಾಡ: ಧಾರವಾಡದ ಎಸ್ ಡಿಎಂ ಆಸ್ಪತ್ರೆ ಎದುರಿಗಿನ ಸತ್ತೂರು ಲೇಔಟ್ ನಲ್ಲಿದ್ದ ಸಾರ್ವಜನಿಕರ ಅನುಕೂಲಕ್ಕಾಗಿ ಇರುವ ನಿವೇಶನದಲ್ಲಿ ತಲೆ ಎತ್ತಿದ್ದ ಅನಧಿಕೃತ ಡಬ್ಬಾ ಅಂಗಡಿಗಳನ್ನು ಮಂಗಳವಾರ ತೆರವು ಮಾಡಲಾಯಿತು.ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದಿಂದ ಈ ತೆರವು ಕಾರ್ಯಾಚರಣೆ ನಡೆಸಲಾಯಿತು.
ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ಮುಂದಾಳತ್ವದಲ್ಲಿ ಈ ತೆರವು ಕಾರ್ಯಾಚರಣೆ ನಡೆಯಿತು. ಹುಬ್ಬಳ್ಳಿ-ಧಾರವಾಡದಲ್ಲಿ ಎಷ್ಟು ಹುಡಾ ಸಿಎ ಲ್ಯಾಂಡಿನಲ್ಲಿ ಇಂತಹ ಅನಧಿಕೃತ ಕಟ್ಟಡ, ಅಂಗಡಿ, ಇತ್ಯಾದಿ ಇರುವುದನ್ನು ಸರ್ವೆ ಮಾಡಿ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳಿಗೆ ನಾಗೇಶ್ವ ಅವರು ಸೂಚನೆ ನೀಡಿದರು.
ಯಾರು ಸಿಎ ಲ್ಯಾಂಡ್ ನಲ್ಲಿ ಡಬ್ಬಾ ಅಂಗಡಿಗಳು, ಕಟ್ಟಡಗಳನ್ನು ಕಟ್ಟಿದರೆ ತಾವೇ ಸ್ವತಃ ತೆಗೆದುಕೊಳ್ಳಬೇಕು ಇಲ್ಲವಾದರೆ ಸರ್ವೆ ನಂತರ ನಾವೇ ತೆರವು ಮಾಡಬೇಕಾಗುತ್ತದೆ ಎಂದರು.
Kshetra Samachara
02/02/2021 02:08 pm