ಕಲಘಟಗಿ: ತಾಲೂಕಿನಾದ್ಯಂತ ಇಂದು ಸಾಯಂಕಾಲ ಸುರಿದ ಮಳೆಯಿಂದ ತಾಲೂಕಿನ ಹುಲ್ಲಂಬಿ ಗ್ರಾಮದಲ್ಲಿ ತೆಂಗಿನಮರಕ್ಕೆ ಸಿಡಿಲು ಬಡಿದು ಮರ ಹತ್ತಿ ಉರಿದಿದೆ.
ನೆಲ್ಲಿಹರವಿ ಗ್ರಾಮದಲ್ಲಿ ಸುರಿದ ಮಳೆಗೆ ಮಾಲಾ ಕೀಶನ ಲಮಾಣಿ ಎನ್ನುವರ ಮನೆ ಚಾವಣಿ ಹಾರಿ ಹೋಗಿದ್ದು, ಮನೆಯಲ್ಲಿ ನೀರು ನುಗ್ಗಿದೆ.ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ತುಮರಿಕೊಪ್ಪ ಗ್ರಾಮದಲ್ಲಿ ವಾಯಾ ಧಾರವಾಡ ಹೋಗುವ ರಸ್ತೆ ಯಲ್ಲಿ ವಿದ್ಯುತ ಕಂಬ, ಮರಗಳು ಗಾಳಿಗೆ ಉರುಳಿ ಬಿದ್ದು ಜನ ಜೀವನ ಅಸ್ತವ್ಯಸ್ತ ಗೊಂಡಿದೆ.
Kshetra Samachara
18/03/2022 08:33 pm