ಹುಬ್ಬಳ್ಳಿ: ವಿಶ್ವ ತಾಯಂದಿರ ದಿನದ ಅಂಗವಾಗಿ ಮೇ 8 ರಂದು ಧಾರವಾಡದ ಡಾ.ವೀರೇಂದ್ರ ಕಲಾಕ್ಷೇತ್ರದಲ್ಲಿ ಮಿಸೆಸ್ ಯುನಿಟಿ ಕ್ವೀನ್ ಇಂಡಿಯಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ಪರ್ಧೆಯ ನಿರ್ದೇಶಕ ಓಂ ಕಿರಣ ಹೇಳಿದರು.
ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಿಸೆಸ್ ಯುನಿಟಿ ಕ್ವೀನ್ ಇಂಡಿಯಾ ಸೀಸನ್ 2 ಸ್ಪರ್ಧೆ ಮೇ 8 ರಂದು ಧಾರವಾಡದ ವೀರೇಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿದ್ದು, ಕಾರ್ಯಕ್ರಮಕ್ಕೆ ಕನ್ನಡ ಚಿತ್ರನಟ, ನಿರ್ದೇಶಕ ಉಪೇಂದ್ರ ಹಾಗೂ ಪ್ರಿಯಾಂಕಾ ಉಪೇಂದ್ರ ಆಗಮಿಸಲಿದ್ದಾರೆ ಎಂದರು.
ಅಂತಾರಾಷ್ಟ್ರೀಯ ತಾಯಂದಿರ ದಿನದ ಆಚರಣೆ ಅಂಗವಾಗಿ ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಮೊದಲ ಬಾರಿಗೆ 20 ಸ್ಪರ್ಧಿಗಳೊಂದಿಗೆ ವಿವಾಹಿತ ಮಹಿಳೆಯರಿಗೆ ಮಿಸೆಸ್ ಯುನಿಟಿ ಕ್ವೀನ್ ಇಂಡಿಯಾ ಸೀಸನ್ 2 ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕನ್ನಡ ಚಲನಚಿತ್ರ ಉಗ್ರಾವತಾರ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.
Kshetra Samachara
06/05/2022 01:53 pm