ಹುಬ್ಬಳ್ಳಿ: ನಾನು ಹಾಗೂ ರಂಜಿತಾ ಒಂದೇ ಫ್ಲ್ಯಾಟನಲ್ಲಿ ವಾಸ ಇದ್ದೆವು. ತುಂಬಾ ಭಯಾನಕ ವಾತಾವರಣ ಇತ್ತು.
ನಾವು ಬದುಕಿ ಬರುತ್ತೇವೆ ಎಂದು ಗೊತ್ತಿರಲಿಲ್ಲ. ಬಾಂಬ್ ಬಿದ್ದ ಮೇಲೆ ಭೂಮಿ ಕಂಪಿಸುತಿತ್ತು. ಕುಡಿಯಲು ನೀರಿಲ್ಲ, ಬಂಕರ್‌ನಲ್ಲಿ ಇದ್ದೆವು ಎಂದು ಉಕ್ರೇನ್ ನಿಂದ ಹುಬ್ಬಳ್ಳಿಗೆ ಬಂದ ಶಿವಾನಿ ಮಡಿವಾಳರ ಹೇಳಿದರು.
ಉಕ್ರೇನ್ ನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಯುನಿವರ್ಸಿಟಿ ಯಿಂದ ಯಾವುದೇ ಮಾಹಿತಿ ನೀಡಲಿಲ್ಲ. ಆನ್ ಲೈನ್ ಕ್ಲಾಸ್ ಮಾಡುವ ಮಾತನ್ನು ಹೇಳಲಿಲ್ಲ. ನಿಮ್ಮ ಊರಿಗೆ ಹೋಗಲು ನಿಮ್ಮ ರಿಸ್ಕ್ ಮೇಲೆ ಹೋಗಬೇಕು ಎಂದಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ..
ಉಕ್ರೇನ್ ಯುನಿವರ್ಸಿಟಿ ಯಾವುದೇ ಜವಾಬ್ದಾರಿ ತೆಗೆದುಕೊಳಲಿಲ್ಲ. ಹೀಗಾಗಿ ನಾವು ಗೊಂದಲದಲ್ಲಿ ಇದ್ದೇವು. ಯುದ್ಧ ಘೋಷಣೆ ಹಾಗೂ ಭಾರತಕ್ಕೆ ವಾಪಸ್ಸಾಗುವ ಬಗ್ಗೆ ಭಾರತ ಸರ್ಕಾರದಿಂದ ಮಾಹಿತಿ ಬಂದಿತ್ತು. ಆದರೆ ಅದು ಐದು ದಿನ ಮೊದಲು ಬಂದಿತ್ತು. ಆಗ ಏರ್ ಟಿಕೆಟ್ ಕೂಡಾ ಇದ್ದರೂ, ಬಹಳ ತುಟ್ಟಿ ಇತ್ತು. ಅಲ್ಲಿಂದ ಒಂದೇ ವಿಮಾನ ಬಂದಿತ್ತು ಎಂದು ಅವರು ಹೇಳಿದರು.
Kshetra Samachara
04/03/2022 11:00 am