ಧಾರವಾಡ: ಸಂಜೆಯಿಂದ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ ಹಾಗೂ ಲಕಮಾಪುರ ಗ್ರಾಮದ ರಸ್ತೆ ಜಲಾವೃತಗೊಂಡಿದ್ದು, ವಾಹನಗಳು ನಿಂತಲ್ಲೇ ನಿಂತುಕೊಂಡಿವೆ.
ಸುಮಾರು ಎರಡ್ಮೂರು ಗಂಟೆಗಳಿಂದ ಮಳೆ ಸುರಿಯುತ್ತಿದ್ದು, ಮಳೆಯಿಂದಾಗಿ ಲಕಮಾಪುರ ಬಳಿಯ ದಾಸನಕೊಪ್ಪದ ಚಿಕ್ಕ ಹಳ್ಳ ತುಂಬಿ ಬಂದಿದ್ದು, ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಹೀಗಾಗಿ ಸಾರಿಗೆ ಸಂಸ್ಥೆ ಬಸ್‌ಗಳೂ ಸೇರಿದಂತೆ ಖಾಸಗಿ ವಾಹನಗಳು ಸಹ ರಸ್ತೆ ದಾಟಲಾಗದೇ ನಿಂತಲ್ಲೇ ನಿಂತುಕೊಂಡಿವೆ.
Kshetra Samachara
10/10/2022 10:17 pm