ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: 'ಶ್ರೀರಾಮನನ್ನ ಆದರ್ಶ ಪುರುಷ ಎಂದು ತೋರಿಸಿದ್ದು ವಾಲ್ಮೀಕಿ ಋಷಿ' ; ಮಾಜಿ ಸಿಎಂ ಶೆಟ್ಟರ್

ಹುಬ್ಬಳ್ಳಿ: ಈ ಬಾರಿಯ ವಾಲ್ಮೀಕಿ ಜಯಂತಿ ವಿಶೇಷವಾದದ್ದು, ಪ್ರತಿ ವರ್ಷ ಮೀಸಲಾತಿ ಹೆಚ್ಚಿಸಲು ಬೇಡಿಕೆ ಇರ್ತಿತ್ತು. ಮೀಸಲಾತಿ ಹೆಚ್ಚಳ ಬಗ್ಗೆ ನಾಗಮೋಹನದಾಸ್ ವರದಿ ಕೊಟ್ಟಾಗಿನಿಂದ ಬೇಡಿಕೆ ಇತ್ತು. ಆದ್ರೆ ಯಾವ ಸರ್ಕಾರವೂ ಮೀಸಲಾತಿ ಹೆಚ್ಚಳ ಮಾಡಲು ಧೈರ್ಯ ‌ಮಾಡಿರಲಿಲ್ಲ. ಆದ್ರೆ ಬಸವರಾಜ್ ಬೊಮ್ಮಾಯಿ ಸರ್ಕಾರ ಮೀಸಲಾತಿ ಹೆಚ್ಚಳ ಮಾಡಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.

ನಗರದಲ್ಲಿ ಮಾಧ್ಯಮ ಜೊತೆ ಮಾತನಾಡಿದ ಅವರು, ಕೋರ್ ಕಮೀಟಿಯಲ್ಲಿ ಮೀಸಲಾತಿ ಹೆಚ್ಚಳಕ್ಕೆ ತೀರ್ಮಾನವಾಗಿತ್ತು. ನಿನ್ನೆ ಸಂಪುಟದಲ್ಲಿ ಬಹಳ ದಿನದ ಬೇಡಿಕೆಗೆ ನಮ್ಮ ಸರ್ಕಾರ ಅಸ್ತು ಅಂದಿದೆ. ಇದೊಂದು ಐತಿಹಾಸಿಕ ನಿರ್ಧಾರ ಎಂದ ಶೆಟ್ಟರ್, ನಾನು ಸರ್ಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ವಾಲ್ಮೀಕಿ ಮತ್ತು ರಾಮ ಬಿಟ್ಟಿಲ್ಲ. ಶ್ರೀರಾಮನ ವ್ಯಕ್ತಿತ್ವ ಜಗತ್ತಿಗೆ ತೋರಿಸಿದ್ದು ವಾಲ್ಮೀಕಿ, ರಾಮನನ್ನ ಆದರ್ಶ ಪುರುಷ ಎಂದು ತೋರಿಸಿದ್ದು ವಾಲ್ಮೀಕಿ ಎಂದು ಜಗದೀಶ್ ಶೆಟ್ಟರ್ ಹೇಳಿದರು.

Edited By : Somashekar
Kshetra Samachara

Kshetra Samachara

09/10/2022 03:33 pm

Cinque Terre

27.15 K

Cinque Terre

1

ಸಂಬಂಧಿತ ಸುದ್ದಿ