ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ನಾಲ್ಕು ದಿನಕ್ಕೊಮ್ಮೆ ಬರುತ್ತಿದ್ದ ಕುಡಿಯುವ ನೀರು, ಏಳು ದಿನಕ್ಕೊಮ್ಮೆ ಪೂರೈಕೆ: ಸಮಸ್ಯೆ ಏನು ಗೊತ್ತಾ?

ಧಾರವಾಡ: ಅದು ಇಡೀ ಹುಬ್ಬಳ್ಳಿ, ಧಾರವಾಡ ಅವಳನಗರಕ್ಕೆ ನೀರು ಸರಬರಾಜು ಮಾಡುವ ಜಾಕ್‌ವೆಲ್.‌ ನೀರು ಶುದ್ಧೀಕರಣ ಆದ ಮೇಲೆ ನಗರಕ್ಕೆ ನೀರು ಕೊಡಬೇಕಾದ ಎಲ್ & ಟಿ ಕಂಪೆನಿ, ಈಗ ಸಮಯಕ್ಕೆ ಸರಿಯಾಗಿ‌ ನೀರು ಕೊಡದೇ ಇರುವುದು ದೊಡ್ಡ ಸಮಸ್ಯೆಯಾಗಿದೆ.‌ ಇದರಿಂದ ಪಾಲಿಕೆಗೆ ಕೂಡ ತಲೆನೋವು ಆರಂಭವಾಗಿದೆ.‌ ಯಾಕೆ ಅನ್ನೋದು ಇಲ್ಲಿದೆ ನೋಡಿ.

ಇದು ಹುಬ್ಬಳ್ಳಿ, ಧಾರವಾಡ ಅವಳಿನಗರಕ್ಕೆ ನೀರು ಸರಬರಾಜು ಮಾಡುವ‌ ಜಾಕ್‌ವೆಲ್. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಬಳಿ ಇರುವ ಈ ಜಾಕ್‌ವೆಲ್‌ನಲ್ಲೇ ನೀರು ಶುದ್ಧೀಕರಣ ಮಾಡಿ ಅವಳಿನಗರಕ್ಕೆ ಬಿಡಲಾಗುತ್ತೆ.‌ ಆದರೆ ಈಗ ಸಮಸ್ಯೆ ಏನಾಗಿದೆ ಅಂದ್ರೆ, ಅವಳಿನಗರಕ್ಕೆ ನಾಲ್ಕು ದಿನಕ್ಕೊಮ್ಮೆ ಬಿಡುವ ನೀರು ಏಳು ದಿನಕ್ಕೆ ಬಿಡಲಾಗುತ್ತಿದೆ.‌ ಇದು ಜಲ‌ ಮಂಡಳಿಯ ಸಮಸ್ಯೆ ಅಲ್ಲ. ಬದಲಾಗಿ ಎಲ್ & ಟಿ ಕಂಪೆನಿಯ ಸಮಸ್ಯೆ. ‌ಈ ಕಂಪೆನಿಗೆ ನೀರು ಸರಬರಾಜು ಮಾಡಲು ಗುತ್ತಿಗೆ ನೀಡಲಾಗಿದೆ.‌ ಆದರೆ ‌ಎಲ್ & ಟಿ ಕಂಪೆನಿ ಇದನ್ನು ಸರಿಯಾಗಿ‌ ನಿಭಾಯಿಸದ ಹಿನ್ನೆಲೆಯಲ್ಲಿ ನೀರು ಸರಿಯಾಗಿ ಜನರಿಗೆ ತಲುಪುತ್ತಿಲ್ಲ. ಈ ಜಾಕ್‌ವೆಲ್ ನಲ್ಲಿ 50 ಜನರಿಗೆ ಕೆಲಸಕ್ಕೆ ಹಚ್ಚಬೇಕಾದ ಕಂಪೆನಿ, 10 ಜನರಿಗೆ ಇಲ್ಲಿ ನೀರು ಬಿಡಲು ಇಟ್ಟಿದೆ. 2032 ರ‌ವರೆಗೆ ಈ ಕಂಪೆನಿ ಒಟ್ಟು 82 ವಾರ್ಡ್ ಗಳಿಗೆ‌ ನೀರು ಕೊಡಬೇಕು. ಈಗಲೇ ಈ ಕಂಪನಿ ಕುಂಟುತ್ತಿದೆ.‌ ಅವಳಿನಗರಕ್ಕೆ 4 ದಿನಕ್ಕೊಮ್ಮೆ ಬರಬೇಕಾದ ನೀರು 7 ಹಾಗೂ 8 ದಿನಕ್ಕೆ ಬರುತ್ತಿದೆ. ‌ಹೀಗಾಗಿ ಸ್ವತಃ ಮೇಯರ್ ಅವರೇ ಜಾಕ್‌ವೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇನ್ನು ಅವಳಿನಗರದ 82 ವಾರ್ಡ್‌ಗಳಲ್ಲಿ 11 ವಾರ್ಡ್‌ಗಳಿಗೆ 24x7 ನೀರು ಸರಬರಾಜು ಇದೆ. ಉಳಿದ ಹಳೇ ಹುಬ್ಬಳ್ಳಿಯ 5 ವಾರ್ಡ್‌ಗಳಿಗೆ ನೀರ ಸಾಗರ ಕೆರೆಯಿಂದ ನೀರು ತೆಗೆದುಕೊಳ್ಳಲಾಗುತ್ತಿದೆ. ಇನ್ನು 25 ವಾರ್ಡ್‌ಗಳಿಗೆ ನಾಲ್ಕು ದಿನಕ್ಕೆ ಒಮ್ಮೆ ನೀರು ಬರುತ್ತಿದೆ. ‌ಇದನ್ನು ಹೊರತು‌ಪಡಿಸಿ 45 ವಾರ್ಡ್‌ಗಳಿಗೆ ಜನಸಂಖ್ಯೆ ಹೆಚ್ಚಳದಿಂದ ನೀರು ಸರಿಯಾಗಿ ಸರಬರಾಜು ಮಾಡಲು ಆಗುತ್ತಿಲ್ಲ, ಅಲ್ಲದೇ ಕೆಲ ವಾರ್ಡ್‌ನ ಪೈಪ್ ಲೈನ್ ಒಡೆದು ಹೋಗಿವೆ, ಅದಕ್ಕಾಗಿಯೇ ಈ ಜಾಕ್‌ವೆಲ್‌ನಲ್ಲಿ 43 ಎಂಎಲ್‌ಡಿ ನೀರು ಶುದ್ಧೀಕರಣ ಘಟಕ ಆರಂಭ ಮಾಡಲಾಗುತ್ತಿದೆ.‌ ಆದರೆ ನೀರು ಕೊಡಬೇಕಾದ ಎಲ್ & ಟಿ ಕಂಪೆನಿ ತಮ್ಮ ಸಿಬ್ಬಂದಿ ಜೊತೆಗೆ ಜಲ‌ ಮಂಡಳಿ ಸಿಬ್ಬಂದಿ ಜೊತೆ ಸರಿಯಾದ ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿದರೆ ಅವಳಿ ನಗರಕ್ಕೆ ಸರಿಯಾದ ನೀರು ಬರಲಿದೆ.

ಒಟ್ಟಿನಲ್ಲಿ ಅವಳಿನಗರಕ್ಕೆ ನಾಲ್ಕು ದಿನಕ್ಕೊಮ್ಮೆ ಬರುವ ನೀರು ಈಗ ಏಳು ದಿನಕ್ಕೆ ಬರುತ್ತಿದೆ. ಈ ಸಮಸ್ಯೆಯನ್ನು ಆದಷ್ಟು ಬೇಗ ಜಲ ಮಂಡಳಿ ಹಾಗೂ ಎಲ್ & ಟಿ ಕಂಪೆನಿ ನಿವಾರಣೆ ಮಾಡಬೇಕಿದೆ.

Edited By : Manjunath H D
Kshetra Samachara

Kshetra Samachara

04/10/2022 01:43 pm

Cinque Terre

16.23 K

Cinque Terre

13

ಸಂಬಂಧಿತ ಸುದ್ದಿ