ಅಳ್ನಾವರ:ತಾಲೂಕಿನ ಸಾರ್ವಜನಿಕ ಕುಂದುಕೊರತೆಗಳನ್ನ ಆಲಿಸಲು ಹಾಗೂ ಪರಿಶೀಲಿಸಲು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ಇಂದು ಅಳ್ನಾವರ ಪಟ್ಟಣಕ್ಕೆ ಭೇಟಿ ನೀಡಿದರು. ಅಳ್ನಾವರ ತಾಲೂಕು ರಚನೆಗೊಂಡು ವರ್ಷಗಳೇ ಕಳೆದರು ಅಭಿವೃದ್ಧಿ ಮಾತ್ರ ಶೂನ್ಯವಾಗಿಯೇ ಇದೆ.ಇದಕ್ಕೆ ಸಂಬಂಧಿಸಿದಂತೆ ಸಂಬಂಧಪಟ್ಟ ಅಧಿಕಾರಿಗಳೊಡನೆ ಚರ್ಚೆ ನಡೆಸಿ ಆದಷ್ಟು ಬೇಗ ಇದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿ ತಿಳಿಸಿದರು.
ಮುಂಜಾನೆಯಿಂದ ಮಾಧಾಹ್ನದ ವರೆಗೂ ಪಟ್ಟಣ ಪಂಚಾಯಿತಿ ಗೆ ಆಗಮಿಸಿದ ಎಲ್ಲ ರೈತರ,ಸಾರ್ವಜನಿಕರ ದೂರುಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಬಗೆ ಹರಿಸಬಹುದಾದ ಸಮಸ್ಯೆಗಳಿಗೆ ಸ್ಪಂದಿಸಿ,ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕೆಲವೊಂದು ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಿದರು.
ಸ್ಥಳದಲ್ಲಿಯೇ ಬಗೆ ಹರಿಸ ಬಹುದಾದ ಯಾವುದೇ ಸಮಸ್ಯೆಗಳನ್ನ ಜಿಲ್ಲಾಧಿಕಾರಿ ಗಳ ವರೆಗೂ ತರಲು ಅವಕಾಶ ಮಾಡಿಕೊಡಬೇಡಿ ಎಂದು ತಹಶೀಲ್ದಾರ್ ಹಾಗೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಹುಲಿಕೇರಿ ಇಂದಿರಮ್ಮನ ಕೆರೆ ಯ ಕಾಲುವೆ ನಿರ್ಮಾಣ,ಪಟ್ಟಣದ ಆಶ್ರಯ ಪ್ಲಾಟ್ ರಸ್ತೆ ಮತ್ತು ಒಳ ಚರಂಡಿ,ಡೌಗಿ ನಾಲಾದ ಹತ್ತಿರ ಇರುವ ರೈತರ ಜಮೀನಿನ ಮಣ್ಣು ಸವಕಳಿ ಸಮಸ್ಯೆ,2019 ರಲ್ಲಿ ಬೆನಚಿ ಗ್ರಾಮದಲ್ಲಿ ವಿದ್ಯುತ್ ಸ್ಪರ್ಶದಿಂದ ಕಬ್ಬು ಬೆಳೆ ಹಾನಿ ಗೆ ಸಂಬಂಧ ಪಟ್ಟಂತೆ ಪರಿಹಾರ ಬರದೆ ಇರದ ಬಗ್ಗೆ ಚರ್ಚೆ,ಹೀಗೆ ಅನೇಕ ಸಮಸ್ಯೆಗಳನ್ನ ಶಾಂತ ರೀತಿಯಿಂದ ಆಲಿಸಿ,ಅವರ ಸಮಸ್ಯೆಗಳಿಗೆ ಪರಿಹಾರ ವದಗಿಸಲು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು,ಪ,ಪಂಚಾಯಿತಿಯ ಸಿಬ್ಬಂದಿಗಳು ಹಾಜರಿದ್ದರು.
Kshetra Samachara
09/09/2022 05:25 pm