ಹುಬ್ಬಳ್ಳಿ: ನೂರಾರು ಕೋಟಿ ಅನುದಾನವನ್ನು ಹಾಕಿ ಅವಳಿನಗರದ ಜನರಿಗೆ ಗುಣಮಟ್ಟದ ಸಾರಿಗೆ ಸೇವೆ ಒದಗಿಸಲು ಬಿ.ಆರ್.ಟಿ.ಎಸ್ ಯೋಜನೆ ಜಾರಿಗೊಳಿಸಲಾಗಿದೆ. ಆದರೆ ನಿರ್ವಹಣೆ ಕೊರತೆಯೋ, ಬೇಕಾಬಿಟ್ಟಿಯಾದ ಕಾಮಗಾರಿಯೋ ವ್ಯವಸ್ಥೆ ಮಾತ್ರ ಸಂಪೂರ್ಣ ಹಳ್ಳ ಹಿಡಿದಿದ್ದು, ಅವ್ಯವಸ್ಥೆಯ ಆಗರವಾಗಿದೆ.
ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಸುಮಾರು ಇಪ್ಪತ್ತಕ್ಕೂ ಹೆಚ್ಚು ನಿಲ್ದಾಣಗಳಿವೆ. ಅದರಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಕಡೆಯಲ್ಲಿ ಸಾರ್ವಜನಿಕರ ಓಡಾಟಕ್ಕೆ ಲಿಪ್ಟ್ ವ್ಯವಸ್ಥೆ ಮಾಡಲಾಗಿದೆ. ಆದರೆ ಈ ಲಿಪ್ಟ್ ಆರಂಭವಾಗಿದ್ದು, ಜನರು ಕೂಡ ನೋಡಿಲ್ಲ ನಾವಂತೂ ಮೊದಲೇ ನೋಡಿಲ್ಲ. ಇಂತಹದೊಂದು ಅವ್ಯವಸ್ಥೆಯಿಂದ ಸುಮಾರು ಸಮಸ್ಯೆಗಳನ್ನು ಜನರು ಅನುಭವಿಸುವಂತಾಗಿದೆ. ನೂರಾರು ಕೋಟಿ ವೆಚ್ಚದ ಯೋಜನೆ ಧೂಳು ಹಿಡಿದಿದ್ದು, ಯೋಜನೆ ಸದ್ಬಳಿಕೆ ಆಗದೆ ಉಳಿದಿದೆ.
ಇನ್ನೂ ಗುಣಮಟ್ಟದ ಸೇವೆ ನೀಡಬೇಕಿದ್ದ ಯೋಜನೆಯ ಲಿಪ್ಟ್ ವ್ಯವಸ್ಥೆ ಹಾಳಾಗಿದ್ದು, ಅಧಿಕಾರಿಗಳು ಮಾತ್ರ ಈ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೇ ಇರುವುದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
Kshetra Samachara
06/09/2022 07:22 pm