ಅಳ್ನಾವರ: ಪಟ್ಟಣದಿಂದ ಧಾರವಾಡಕ್ಕೆ ಹೋಗಬೇಕಾದರೆ ಪ್ರಯಾಣೀಕರು ತಮ್ಮ ಜೀವವನ್ನ ಅಂಗೈಯಲ್ಲಿ ಹಿಡಿದು ಪ್ರಯಾಣ ಮಾಡಬೇಕು.
ಇದು ಅಧಿಕಾರಿಗಳು ಈ ಕ್ಷೇತ್ರವನ್ನಾಳೋ ರಾಜಕಾರಣಿಗಳು ಪ್ರಯಾಣೀಕರಿಗೆ ಜನಸಾಮಾನ್ಯರಿಗೆ ಕೊಡುತ್ತಿರೋ ಬಂಪರ್ ಆಫರ್ !
ಪ್ರೀಯ ವಿಕ್ಷಕರೇ ಇಲ್ಲಿ ರಸ್ತೆಯಲ್ಲಿ ತಗ್ಗುಗಳಿವಿಯೋ ? ಇಲ್ಲಾ ತಗ್ಗುಗಳಲ್ಲಿ ರಸ್ತೆ ಇದಿಯೋ ಯಾರಿಗೆ ಗೊತ್ತು ?
ಅಳ್ನಾವರ ಧಾರವಾಡ ಮಾರ್ಗ ಮದ್ಯ ಕುಂಬಾರಕೊಪ್ಪ ಹತ್ತಿರ ರೈಲ್ವೆ ಗೇಟ್ ಬಳಿ ರಸ್ತೆಯಲ್ಲಿ ಮಾರುದ್ದ ತಗ್ಗುಗಳಿವೆ. ಪ್ರಯಾಣೀಕರು ಪ್ರತಿನಿತ್ಯ ಸಂಚಾರ ಮಾಡುವ ರಸ್ತೆ ಇದು.ಅಧಿಕಾರಿಗಳು ಇದನ್ನು ದುರಸ್ತಿ ಗೊಳಿಸದೇ ನಿಷ್ಕಾಳಜಿ ಮಾಡುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.
ಪ್ರತಿನಿತ್ಯ ಒಂದಾದರೂ ಅಪಘಾತ ಸಂಭವಿಸುವುದು ಇಲ್ಲಿ ಸರ್ವೇ ಸಾಮಾನ್ಯವಾಗಿದ್ದು ರಸ್ತೆ ಅಭಿವೃದ್ಧಿಗೆ ಜನರ ಒತ್ತಾಯ ಹೆಚ್ಚಾಗಿದೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಜನರ ಸಮಸ್ಯೆ ಆಲಿಸಿ, ಕನಿಷ್ಠ ಪಕ್ಷ ರಸ್ತೆಯನ್ನು ಈ ಮಳೆಗಾಲದಲ್ಲಿ ತಾತ್ಕಾಲಿಕವಾಗಿ ದುರಸ್ತಿ ಮಾಡಿ ಎಂಬುದು ಸ್ಥಳೀಯ ಜನರ ಅಭಿಪ್ರಾಯವಾಗಿದೆ.
ವರದಿ: ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ
Kshetra Samachara
02/09/2022 06:42 pm