ಕುಂದಗೋಳ: ಇದು ಗ್ರಾಮ ಪಂಚಾಯಿತಿ ನಿರ್ಲಕ್ಷ್ಯವೋ, ಲೋಕೋಪಯೋಗಿ ಇಲಾಖೆ ದಿವ್ಯ ನಿರ್ಲಕ್ಷ್ಯವೋ ಗೊತ್ತಿಲ್ಲ. ಆದ್ರೆ ಈ ಕಡಪಟ್ಟಿ ಅಲ್ಲಾಪೂರ ರಸ್ತೆ ನೋಡಿದವ್ರು ಇಲ್ಲಿ ಓಡಾಡುವವರು ಇಬ್ಬರಿಗೂ ಛೀಮಾರಿ ಹಾಕ್ತಿದ್ದಾರೆ.
ಕಳೆದ ಹಲವಾರು ವರ್ಷಗಳಿಂದ ಈ ರಸ್ತೆ ಮಳೆಗಾಲ ಬಂತಂದ್ರೆ ಸಾಕು ಅಪಘಾತದ ಕೂಪವಾಗಿ ಬಿಡುತ್ತೆ. ಅದೆಷ್ಟರ ಮಟ್ಟಿಗೆ ಅಂದ್ರೆ ಇದು ರಸ್ತೆಯೋ? ಚರಂಡಿಯೋ? ತಗ್ಗು ಗುಂಡಿಗಳ ಬಿಡಾರವೋ ಗೊತ್ತೇ ಆಗಲ್ಲ..
ಇಂತಹ ರಸ್ತೆಯಲ್ಲೇ ಸಾರಿಗೆ ಬಸ್, ಶಾಲಾ ಮಕ್ಕಳು, ರೈತರು, ಜನಸಾಮಾನ್ಯರು ಓಡಾಟ ನಡೆಸುತ್ತಿದ್ದು, ಇಲ್ಲಿ ಬಿದ್ದು ಎದ್ದವರಿಗೆ ಲೆಕ್ಕವಿಲ್ಲ ಬಿಡಿ. ಪರಿಸ್ಥಿತಿ ಹೀಗಿದ್ದರೂ ಜನಪ್ರತಿನಿಧಿಗಳು ಮಾತ್ರ ಇತ್ತ ತಲೆ ಹಾಕಿಲ್ಲ.
ಈ ಬಗ್ಗೆ ಜನಪ್ರತಿನಿಧಿಗಳಿಗೆ ವಿಷಯ ತಿಳಿಸಿದ್ರೂ ಅಭಿವೃದ್ಧಿ ಮಾತ್ರ ಶೂನ್ಯ. ಒಟ್ಟಾರೆ ರಸ್ತೆ ಬಗ್ಗೆ ಕ್ರಮ ಕೈಗೊಳ್ಳದ ಗ್ರಾಮ ಪಂಚಾಯಿತಿ ಪಿಡಿಓ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನೀವೊಮ್ಮೆ ರಸ್ತೆ ಪ್ರಯಾಣ ಬೆಳೆಸಿ ಕಷ್ಟ ಅನುಭವಿಸಿದ್ರೆ ತಿಳಿಯುತ್ತೆ ಇಲ್ಲಿನ ಸಮಸ್ಯೆ ಏನೂ ಅಂತ…
Kshetra Samachara
08/07/2022 04:07 pm