ಕಲಘಟಗಿ: ಕಲಘಟಗಿಯಿಂದ ತಡಸಗೆ ಹೋಗಬೇಕಾದರೆ ಜನರು ಹಾಗೂ ವಾಹನ ಸವಾರರು ಕೈಯಲ್ಲಿ ಜೀವ ಹಿಡಿದುಕೊಂಡು ಹೋಗುವಂತಾಗಿದೆ. ಹೌದು. ಕಲಘಟಗಿಯಿಂದ ತಡಸ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಅಲ್ಲಲ್ಲಿ ತೆಗ್ಗು ಗುಂಡಿಗಳು ಬಿದ್ದು ಹದಗೆಟ್ಟು ವಾಹನ ಸವರಾರು ತೊಂದರೆ ಅನುಭವಿಸುತ್ತಿದ್ದಾರೆ.
ಈ ರಸ್ತೆಯು ಲೋಕೋಪಯೋಗಿ ಇಲಾಖೆಗೆ ಸಂಬಂಧ ಪಟ್ಟದೆ. ಆದರೆ ಇಲ್ಲಿಯ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದು ವಿಪರ್ಯಾಸವೇ ಸರಿ.ಶಾಸಕರು ಒಂದು ಬಾರಿ ಈ ರಸ್ತೆಯಲ್ಲಿ ಓಡಾಡಿದರೇ ಇಲ್ಲಿಯ ಸತ್ಯದ ಅರಿವು ಅವರಿಗೂ ತಿಳಿಯುತ್ತದೆ ಎಂದು ಇಲ್ಲಿಯ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೆ ಈ ರಸ್ತೆಯ ತೆಗ್ಗು ಗುಂಡಿಗಳನ್ನು ಮುಚ್ಚ ಬೇಕು ಎಂದು ಸಾರ್ವಜನಿಕರು ಹಾಗೂ ವಾಹನ ಸವಾರರ ಒತ್ತಾಯವಾಗಿದೆ.
ವರದಿ: ಉದಯ ಗೌಡರ
Kshetra Samachara
06/07/2022 03:55 pm