ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಏನ್ರಿ ಸ್ವಾಮಿ ಕೆಟ್ಟ ವಾಸನೆಯಿಂದ ಜೀವನ ಸಾಕಾಗೈತಿ ನೋಡ್ರಿ- ಪಾಲಿಕೆಯವರಂತೂ ಕಣ್ಣು ಬಿಟ್ಟು ನೋಡ್ತಿಲ್ಲ

ಹುಬ್ಬಳ್ಳಿ: ಕೇಂದ್ರ ಸರ್ಕಾರದ ಮಹತ್ವದ ನಿರ್ಧಾರದಲ್ಲಿ ಒಂದಾಗಿರುವ ಸ್ವಚ್ಛ ಭಾರತದ ಅಭಿಯಾನ ನಮ್ಮ ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಸಂಬಂಧಿಸಿಲ್ಲ ಎಂಬಂತೆ ಕಾಣುತ್ತಿದೆ. ಏಕೆಂದರೆ ದಿನನಿತ್ಯವೂ ಅವಳಿನಗರದ ಸಮಸ್ಯೆಗಳ ಸರಮಾಲೆಯಲ್ಲಿಯೇ ಜೀವನ ನಡೆಸುವಂತಾಗಿದೆ.

ಹುಬ್ಬಳ್ಳಿಯ ಶಾ ಬಜಾರ್‌ನಲ್ಲಿ ಸುಮಾರು ದಿನಗಳಿಂದ ಡ್ರೈನೇಜ್ ನೀರು ಪೋಲು ಆಗುತ್ತಿದ್ದು, ಇಲ್ಲಿನ ಜನರು ದುರ್ವಾಸನೆಯಲ್ಲಿ ಉಸಿರಾಟ ನಡೆಸುವಂತಾಗಿದೆ. ಸ್ವಚ್ಛತೆಯ ಹೆಸರಿನಲ್ಲಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಹು-ಧಾ ಮಹಾನಗರ ಪಾಲಿಕೆ ಅವ್ಯವಸ್ಥೆ ನೋಡಿದರೆ ನಿಜಕ್ಕೂ ಬೇಸರವಾಗುತ್ತದೆ.

ಇನ್ನೂ ಈ ಸಮಸ್ಯೆ ಕುರಿತು ಸಾರ್ವಜನಿಕರು ಪಾಲಿಕೆ ಸಿಬ್ಬಂದಿಗೆ ಕರೆ ಮಾಡಿದರೆ ಸಿಬ್ಬಂದಿಯು ಮೈಗೆ ಎಣ್ಣಿ ಹಚ್ಚಿಕೊಂಡು ನಿಂತಿರುತ್ತಾರೆ. ಹಾರಿಕೆ ಉತ್ತರ ನೀಡಿ ಜಾರಿಕೊಳ್ಳವುದು ಪರಿಪೂರ್ಣವಾಗಿ ಕಲೆತುಕೊಂಡಿದ್ದಾರೆ. ಅಲ್ಲದೇ ಇಲ್ಲಿನ ವ್ಯಾಪಾರಸ್ಥರ ಗೋಳಂತೂ ಹೇಳ ತೀರದಾಗಿದೆ. ಪಬ್ಲಿಕ್ ನೆಕ್ಸ್ಟ್‌ಗೆ ಕರೆಮಾಡಿದ ವರ್ತಕರೊಬ್ಬರು, ಸರ್ ನಾವು ರಂಜಾನ್ ತಿಂಗಳಲ್ಲಿ ಉಪವಾಸ ಇರುತ್ತೇವೆ. ಈ ವಾಸನೆಯಿಂದ ನಿಜಕ್ಕೂ ನರಕಯಾತನೆ ಅನುಭವಿಸುವಂತಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಕೂಡಲೇ ಪಾಲಿಕೆ ಸಿಬ್ಬಂದಿ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಮುಕ್ತಿ ನೀಡಬೇಕಿದೆ.

Edited By : Manjunath H D
Kshetra Samachara

Kshetra Samachara

16/04/2022 10:47 pm

Cinque Terre

40.77 K

Cinque Terre

1

ಸಂಬಂಧಿತ ಸುದ್ದಿ