ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಬ್ರಿಡ್ಜ್ ಸಂಚಾರ್ ಕ್ಲೋಸ್, ರೊಕ್ಕಾ ಕೊಡ್ರಿ ಹೊಲದಾಗ್ ಹೋಗ್ರಿ

ಕುಂದಗೋಳ : ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ ನೀವೂ ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ ಕೊಡದಂಗ ಶಿರೂರು ಬ್ರಿಡ್ಜ್ ಸಂಚಾರ್ ಬಂದ್ ಮಾಡಿದ್ರೀ.

ಆದ್ರೇ.! ಜನಾ ಕೇಳತಾರ್ ಪಾಪಾ ರೈತರ ಹೊಲದಾಗ ವಾಹನ ಓಡಾಟ ಚಾಲೂ ಮಾಡಿದ್ರ್, ರೈತ ಬ್ಯಾಡ್ರೀ ಪಾ, ಹೊಲಾ ಹಾಳ್ ಅಕ್ಕೈತಿ, ಬೆಳೆ ಹಾಳ್ ಅಕ್ಕೈತಿ ಅಂದ್ರೂ ವಾಹನ ಓಡೋದು ನಿಲ್ಲಿಲ್ಲಾ.

ಮತ್ತ್ ನೀವೂ ಈ ವಿಚಾರವಾಗಿ ರೈತರಿಗೆ ಯಾವುದೇ ಪರಿಹಾರ ಕೊಡಲಿಲ್ಲ, ಹಿಂಗ್ಯಾಗಿ ರೈತ ತಾನೇ ಪರಿಹಾರ ಹುಡಕ್ಯಾನ್ ನೋಡ್ರಿ.

ಅರೆ. ಏನ್ ಪರಿಹಾರ ಅಂದ್ರೇನ್ ! ನೋಡ್ರಿಲ್ಲೇ ಕಾರು, ಲಾರಿ, ಬೈಕ್, ಆಟೋ, ಗೂಡ್ಸ್ ಹಿಂಗ್ ಯಾವುದೇ ಗಾಡಿ ಬಂದ್ರೂ ರೊಕ್ಕಾ ತಗೋಂಡ ಹೊಲದಾಗ ಸಂಚಾರ ಮಾಡಾಕ್ ಬಿಟ್ಟಾರ್.

ಹೌದರೀ ಮತ್ತ್ ರೈತರ ನಷ್ಟ ಕೊಡೋರು ಯಾರು ? ಕೇಳ್ರಿ ಅಲ್ಲೇ ಎನ್ ಪರಿಸ್ಥಿತಿ ಐತಿ ಅಂತ್ಹೇಳಿ ರೈತ ಹೇಳ್ಯಾನ್.

ಕೇಳಿದ್ರಲ್ಲಾ, ಇವತ್ತ್ ಅಂದ್ರೆ ಗುರುವಾರ ಮಧ್ಯಾಹ್ನದ ಮ್ಯಾಲ್ ಪಾಪಾ ಅನ್ನದಾತ ಇಂತಹ ನಿರ್ಧಾರ ಮಾಡ್ಯಾನ್, ಇದರಾಗ ಕೆಲವೊಬ್ರು ರೊಕ್ಕಾ ಕೊಡು ಸಲುವಾಗಿ ರೈತರ ಜೊತೆ ವಾಗ್ವಾದ ಮಾಡ್ಯಾರ ನೋಡ್ರಿಲ್ಲೇ.

ನೋಡಿದ್ರಲ್ಲಾ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳೇ, ಮತ್ತ್ ನಮ್ಮ ಕುಂದಗೋಳ ಆರಕ್ಷಕರೇ ದಯವಿಟ್ಟು ಶಿರೂರು ಬ್ರಿಡ್ಜ್ ಕಡೆ ಹೋಗ್ರಿ ಆ ಪರಿಸ್ಥಿತಿ ನೋಡ್ರಿ ನಿರ್ಧಾರ ತಗೋರಿ.

-ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ

Edited By : Shivu K
Kshetra Samachara

Kshetra Samachara

11/03/2022 08:48 am

Cinque Terre

134.05 K

Cinque Terre

18

ಸಂಬಂಧಿತ ಸುದ್ದಿ