ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಕಮಡೊಳ್ಳಿಯ ಹಂದಿ ಹಾವಳಿಗೆ ಸೂಕ್ತ ಕ್ರಮ ಕೈಗೊಳ್ಳಿ !

ಕುಂದಗೋಳ: ತಾಲೂಕಿನ ಬೃಹತ್ ಗ್ರಾಮ ಹಾಗೂ ಗ್ರೇಡ್ ಒನ್ ಗ್ರಾಮ ಪಂಚಾಯಿತಿ ಹೊಂದಿದ ಕಮಡೊಳ್ಳಿ ಗ್ರಾಮದಲ್ಲಿ ಹಂದಿಗಳ ಹಾವಳಿ ಅತಿಯಾಗಿದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪಬ್ಲಿಕ್ ನೆಕ್ಸ್ಟ್'ಗೆ ವೀಡಿಯೋ ಕಳುಹಿಸಿ ಮನವಿ ಮಾಡಿದ್ದಾರೆ.

ಕಮಡೊಳ್ಳಿ ಗ್ರಾಮದಿಂದ ಹಿರೇಹರಕುಣಿಗೆ ಸಂಪರ್ಕ ಮಾಡುವ ಮಾರ್ಗದಲ್ಲೇ ಹಂದಿಗಳ ವಾಸ ಅತಿಯಾಗಿದ್ದು, ಈ ಮಾರ್ಗದಲ್ಲಿ ವಾಹನ ಸಂಚಾರ ಸೇರಿದಂತೆ ಸುತ್ತ ಮುತ್ತಲಿನ ಕಸ ಕಡ್ಡಿ ಕೆದಕಿ ಹಂದಿಗಳು ಇಡೀ ವಾತಾವರಣವನ್ನ ಗಬ್ಬು ಮಾಡುತ್ತಿದ್ದು ಈ ಹಂದಿಗಳು ಈಗ ಗ್ರಾಮದ ಒಳಗೂ ಲಗ್ಗೆ ಇಟ್ಟಿವೆ.

ಈ ಪರಿಣಾಮ ಸಾರ್ವಜನಿಕರಿಗೆ, ಸ್ಥಳೀಯ ನಿವಾಸಿಗಳಿಗೆ ತೊಂದರೆ ಉಂಟಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಹಂದಿಗಳ ಹಾವಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

Edited By : Shivu K
Kshetra Samachara

Kshetra Samachara

04/03/2022 09:15 am

Cinque Terre

14.71 K

Cinque Terre

0

ಸಂಬಂಧಿತ ಸುದ್ದಿ