ನವಲಗುಂದ : ನವಲಗುಂದದಲ್ಲಿ ಪ್ರಥಮ ಬಾರಿಗೆ ವಿಕಲಚೇತನರಿಗೆ ಬಸ್ ಪಾಸ್ ವಿತರಣೆ ಮಾಡಲಾಗುತ್ತಿದ್ದು, ಪಾಸ್ ಪಡೆದುಕೊಳ್ಳಲು ಸೋಮವಾರ ವಿಕಲಚೇತನರು ಬಸ್ ನಿಲ್ದಾಣದಲ್ಲಿ ಸರತಿ ಸಾಲಿನಲ್ಲಿ ನಿಂತಿದ್ದರು.
ಈ ಮೊದಲು ಹುಬ್ಬಳ್ಳಿಯಲ್ಲಿ ನೀಡಲಾಗುತ್ತಿದ್ದ ಪಾಸ್, ಈಗ ಅಣ್ಣಿಗೇರಿ ಮತ್ತು ನವಲಗುಂದದ ವಿಕಲಚೇತನರ ಅನುಕೂಲವನ್ನು ಪರಿಗಣಿಸಿ, ಫೆಬ್ರವರಿ 7 ಅಂದರೆ ಇಂದಿನಿಂದ ಇದೇ ತಿಂಗಳ 28 ರ ವರೆಗೆ ನವಲಗುಂದ ಪಟ್ಟಣದಲ್ಲೆ ಪಾಸ್ ವಿತರಿಸಲಾಗುತ್ತಿದೆ.
ಇನ್ನು ಈ ಬಗ್ಗೆ ಕಳೆದ ವಾರ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಅವರಿಗೆ ಮನವಿ ನೀಡಲಾಗಿತ್ತು. ಇದರಿಂದಾಗಿ ಸಂತಸಗೊಂಡ ವಿಕಲಚೇತನರು ಸಚಿವರಿಗೆ ಕೃತಜ್ಞತೆಯನ್ನು ತಿಳಿಸಿದರು.
Kshetra Samachara
07/02/2022 06:51 pm