ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಶೌಚಾಲಯ ಇದ್ದರೂ ಬಯಲಿನಲ್ಲಿಯೇ ಮೂತ್ರ ವಿಸರ್ಜನೆ: ಎಷ್ಟು ಹೇಳಿದರೂ ಅಷ್ಟೇ...!

ಹುಬ್ಬಳ್ಳಿ: ನಮ್ಮ ಜನರಿಗೆ ಹಾಗೂ ನಮ್ಮ ಸರ್ಕಾರಕ್ಕೆ ಯಾವುದೇ ಯೋಜನೆ, ಯಾವುದೇ ಅಭಿಯಾನ ಬಂದರೂ ಹೊಸತರಲ್ಲಿ ಮಾತ್ರ ಅದಕ್ಕೆ ಬೆಲೆ ಇರುತ್ತದೆ. ಸ್ವಲ್ಪ ದಿನ ಕಳೆಯಿತು ಅಂದರೆ ಮೂಲೆ ಸೇರುವುದಂತೂ‌ ಖಂಡಿತ.

ಹೌದು..ಸ್ವಚ್ಛ ಭಾರತ ಯೋಜನೆ... ಸ್ವಚ್ಛತೆ ಕಡೆಗೆ ನಮ್ಮ ನಡಿಗೆ ಅಂತ ಜನರು ಹಾಗೂ ಜನಪ್ರತಿನಿಧಿಗಳು ಮಾತ್ರವಲ್ಲದೆ ಸರ್ಕಾರ ಕೂಡ ಬಾಯಿ ಬಡೆದುಕೊಂಡಿದೆ. ಆದರೆ ಸ್ವಚ್ಚತೆಯ ಬಗ್ಗೆ ಯಾರಿಗೂ ಕಿಂಚಿತ್ತೂ ಕಾಳಜಿಯಿಲ್ಲ. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಲಕ್ಷಾಂತರ ರೂಪಾಯಿ ಹಣವನ್ನು ಖರ್ಚು ಮಾಡಿ ಮೂತ್ರ ವಿಸರ್ಜನೆಗಾಗಿ ಶೌಚಾಲಯ ನಿರ್ಮಾಣ ಮಾಡಿದೆ. ಆದರೂ ಕೂಡ ನಮ್ಮ ಜನರು ಬಯಲಿನಲ್ಲಿಯೇ ಮೂತ್ರ ವಿಸರ್ಜನೆ ಮಾಡುವ ಮೂಲಕ ಯೋಜನೆಯ ಮರ್ಯಾದೆಯನ್ನು ತೆಗೆಯುತ್ತಿದ್ದಾರೆ.

ಇನ್ನೂ ಜನರು ಕೂಡ ಬಯಲು ಮೂತ್ರ ವಿಸರ್ಜನೆ ಮಾಡಲು ಸೂಕ್ತ ಕಾರಣವಂತೂ ಇದ್ದೆ ಇದೆ. ಈ ಶೌಚಾಲಯಗಳು ನಿರ್ವಹಣೆ ಕೊರತೆಯಿಂದ ಅವ್ಯವಸ್ಥೆಯಿಂದ ಕೂಡಿರುವುದರಿಂದ ಸ್ವಾಭಾವಿಕವಾಗಿ ಜನರು ಬಯಲಿನಲ್ಲಿ ‌ಮೂತ್ರ ವಿಸರ್ಜನೆ ಮಾಡುತ್ತಾರೆ. ಆದ್ದರಿಂದ ಸರಿಯಾದ ನಿರ್ವಹಣೆ ಇಲ್ಲದೇ ಯೋಜನೆಗಳು ಹಳ್ಳ ಹಿಡಿಯುತ್ತಿವೆ.

ಒಟ್ಟಿನಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹುಬ್ಬಳ್ಳಿ ಧಾರವಾಡ ಅವಳಿನಗರ ಅವ್ಯವಸ್ಥೆ ಆಗರವಾಗಿದೆ. ಮಹಾನಗರ ಪಾಲಿಕೆಗಂತೂ ಯಾವುದೇ ಕಾಳಜಿ ಇಲ್ಲದೇ ಹೇಳಿದಷ್ಟೇ ಮಾಡುವ ಕೆಲಸಗಾರನಂತೇ ಯೋಜನೆ ಅನುಷ್ಠಾನದ ಜವಾಬ್ದಾರಿ ಮಾತ್ರ ನಿರ್ವಹಿಸುತ್ತಿದೆ ವಿನಃ ಯಾವುದೇ ಜವಾಬ್ದಾರಿಯುತ ಕಾರ್ಯಕ್ಕೆ ಮುಂದಾಗುತ್ತಿಲ್ಲ.

Edited By : Shivu K
Kshetra Samachara

Kshetra Samachara

15/01/2022 05:23 pm

Cinque Terre

28.39 K

Cinque Terre

2

ಸಂಬಂಧಿತ ಸುದ್ದಿ