ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಫುಟ್ ಪಾತ್ ಜನರ ಓಡಾಟಕ್ಕೋ...? ಪೊಲೀಸ್ ಇಲಾಖೆ ಬ್ಯಾರಿಕೇಡ್ ಹೊಂದಿಸಿ ಇಡುವುದಕ್ಕೋ...?

ಹುಬ್ಬಳ್ಳಿ: ಪಾದಚಾರಿಗಳಿಗೆ ಸುರಕ್ಷಿತ ಸಂಚಾರಕ್ಕಾಗಿ ಫುಟ್ ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ ಪೊಲೀಸರೇ ಫುಟ್ ಪಾತ್ ಗೆ ಬ್ಯಾರಿಕೇಡ್ ನಿಲ್ಲಿಸಿ ಸಾರ್ವಜನಿಕರು ರಸ್ತೆಯ ಮೇಲೆ ಓಡಾಡುವಂತೆ ಮಾಡಿದ್ದಾರೆ.

ಹೌದು..ವಾಣಿಜ್ಯನಗರಿ ಹುಬ್ಬಳ್ಳಿಯ ಜನನಿಬಿಡ ಹಾಗೂ ಹೆಚ್ಚು ವಾಹನ ದಟ್ಟಣೆಯ ಪ್ರದೇಶವಾದ ಹುಬ್ಬಳ್ಳಿಯ ಉಪನಗರ ಠಾಣೆ ಹತ್ತಿರದಲ್ಲಿ ಸಾರ್ವಜನಿಕರ ಓಡಾಟಕ್ಕೆ ಮಾಡಿರುವ ಫುಟ್ ಪಾತ್ ಮೇಲೆ ಹಾಗೂ ಚಲಿಸುವ ಮಾರ್ಗವನ್ನು ಬ್ಯಾರಿಕೇಡ್ ನಿಂದ ಬಂದ್ ಮಾಡಿದ್ದು, ಜನರು ವಾಹನಗಳ ಮಧ್ಯದಲ್ಲಿಯೇ ನಡೆದುಕೊಂಡು ಹೋಗಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ.

ಫುಟ್ ಪಾತ್ ಗಳನ್ನು ನಿರ್ಮಾಣ ಮಾಡಿದ್ದು, ಸಾರ್ವಜನಿಕರ ಓಡಾಟಕ್ಕೋ ಅಥವಾ ಪೊಲೀಸರ ಬ್ಯಾರಿಕೇಡ್ ಹೊಂದಿಸಿ ಇಡುವುದಕ್ಕೋ ಎಂಬುವುದು ಯಕ್ಷ ಪ್ರಶ್ನೆಯಾಗಿದೆ. ಇನ್ನೂ ಗುರುವಾರ ದಿನದಂದು ಸಾಯಿಬಾಬಾ ಮಂದಿರಕ್ಕೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಫುಟ್ ಪಾತ್ ಬಂದ್ ಮಾಡಿರುವುದರಿಂದ ವಾಹನದಟ್ಟಣೆ ನಡುವೆಯೇ ಜನರು ನಡೆದುಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಪೊಲೀಸ್ ಆಯುಕ್ತರು ಈ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಂಡು ಜನರ ಹಿತವನ್ನು ಕಾಪಾಡಬೇಕಿದೆ.

Edited By : Shivu K
Kshetra Samachara

Kshetra Samachara

12/01/2022 12:26 pm

Cinque Terre

22.92 K

Cinque Terre

2

ಸಂಬಂಧಿತ ಸುದ್ದಿ