ಹುಬ್ಬಳ್ಳಿ: ಪೊಂಗಲ್ ಹಬ್ಬದ ಅಂಗವಾಗಿ ಜ. 13ರಂದು ಬೆಳಗಾವಿ–ಯಶವಂತಪುರ ನಡುವೆ ಎರಡೂ ಮಾರ್ಗದಿಂದ ವಿಶೇಷ ರೈಲು ಸಂಚರಿಸಲಿದೆ.
ಅಂದು ಯಶವಂತಪುರದಿಂದ ರಾತ್ರಿ 9.30ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.25ಕ್ಕೆ ಬೆಳಗಾವಿ ತಲುಪಲಿದೆ. ಅದೇ ದಿನ ಬೆಳಗಾವಿಯಿಂದ 9.20ಕ್ಕೆ ಹೊರಟು ಮರುದಿನ ಬೆಳಿಗ್ಗೆ 8.30ಕ್ಕೆ ಯಶವಂತಪುರ ತಲುಪಲಿದೆ.
ತುಮಕೂರು, ತಿಪಟೂರು, ಅರಸೀಕೆರೆ, ಕಡೂರು, ಚಿಕ್ಕಜಾಜೂರು, ದಾವಣಗೆರೆ, ಹರಿಹರ, ರಾಣೆಬೆನ್ನೂರು, ಹಾವೇರಿ, ಹುಬ್ಬಳ್ಳಿ, ಧಾರವಾಡ, ಅಳ್ನಾವರ, ಲೋಂಡಾ ಮತ್ತು ಖಾನಾಪುರ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
Kshetra Samachara
10/01/2022 07:03 pm