ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹುರುಪಿನಿಂದ ಹುಬ್ಬಳ್ಳಿಗೆ ಬಂದ್ರ ಬ್ಯಾಸರಾಗಿ ಹೋಗ್ಬೇಕ ನೋಡ್ರಿ

ಹುಬ್ಬಳ್ಳಿ: ನಮ್ಮ ಹುಬ್ಬಳ್ಳಿ ಮಂದಿ ಪರಿಸ್ಥಿತಿ ಎಷ್ಟ ಕೆಟ್ಟ ಐತಿ ಅಂದ್ರೆ. ಯಾವ ಯೋಜನೆ ಬಂದು ಅನುಕೂಲ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಯೋಜನೆ ಪೂರ್ಣಗೊಳ್ಳುವ ಮೊದಲ ನಮ್ಮ ಜನರನ್ನ ಹೈರಾಣ ಮಾಡಿ ಬಿಡ್ತಾವ...

ಹೌದ.... ನೋಡ್ರಿ ನೀವು ಹೇಳುವುದು ಕರ್ರೇ ಐತಿ ಅಂತ ಗೋಣ ಹಾಕ್ತಿರಲ್ಲ... ನಿಜಾನ ನೋಡ್ರಿ.... ನಮ್ಮ ಹುಬ್ಬಳ್ಳಿಗೆ ಸ್ನೋ..ಪೌಡರ್ ಹಚ್ಚಿ ಮಸ್ತ್ ಝಂ...ಝಂ.... ಕಾಣುವಂಗ ಮಾಡೋಕೆ ಸ್ಮಾರ್ಟ್ ಸಿಟಿ ಯೋಜನೆ ಬಂದೈತಿ‌. ಆದರೆ ಈ ಯೋಜನೆಯಿಂದ ನಮ್ಮ ಜನ ಫುಲ್ ಬೇಸತ್ತು ಹೋಗ್ಯಾರ.. ಯಾಕ ಅಂದರೆ ಬಸ್ ಸ್ಟ್ಯಾಂಡ್ ಕೆಡಿವಿ ಬಿಟ್ಟಾರ... ಆದರ ಜನರಿಗೆ ನಿಲ್ಲೋಕೆ ಅಂತ ಏನು ವ್ಯವಸ್ಥೆ ಮಾಡಿಲ್ಲ... ನಮ್ಮ ಮಂದಿ ಎಷ್ಟ ಕಷ್ಟಪಟ್ಟು ಮಳ್ಯಾಗ ಓಡ್ಯಾಡ್ತಿದ್ದಾರೆ ನೋಡ್ರಿ...

ನಮ್ಮ ಹುಬ್ಬಳ್ಳಿ ಪರಿಸ್ಥಿತಿ ನೋಡಿದರೇ ಬಾಳ ಬ್ಯಾಸರ್ ಆಕೈತಿ.. ನಿಲ್ಲಾಕ ಬಸ್ ಸ್ಟ್ಯಾಂಡ್ ಸರಿಯಲ್ಲ... ಓಡಾಡೋಕೆ ರಸ್ತೆ ಸರಿಯಲ್ಲ. ಸ್ವಚ್ಚತಾ ಅಂತರೂ ಹೇಳಾಕ ಹೋಗ ಬ್ಯಾಡ್ರಿ...ಪಾಪ ಜನಪ್ರತಿನಿಧಿಗಳ ಎಷ್ಟ ಅಂತ ಮಾಡೋಕೆ ಆಗುತ್ತೇ... ಅವರಿಗೂ ಕೇಳಿ ಕೇಳಿ ಸಾಕಾಗಿ ಸುಮ್ಮನೆ ರಿಬ್ಬನ್ ಕಟ್ ಮಾಡೋದು ಮನೆಗೆ ಹೋಗೋದು ಮಾಡ್ತಿದ್ದಾರೆ...

ಒಟ್ಟಿನ್ಯಾಗ ನಮ್ಮ ಹುಬ್ಬಳ್ಳಿ ಪರಿಸ್ಥಿತಿ ಬಗೆಹರಿಸೋಕೆ... ಬ್ರಹ್ಮ ವಿಷ್ಣು ಮಹೇಶ್ವರರೇ ತಲೆಕೆಟ್ಟು ಬರಬೇಕು ನೋಡ್ರಿ... ರ್ರೀ..ಅಧಿಕಾರಿಗಳೆ ಸ್ವಲ್ಪ ನೋಡ್ರಿಪಾ ನಮ್ಮ ಜನರ ಕಷ್ಟ ಯಾಕ ಹಿಂಗ ಮಾಡಾಕುಂತಿರಿ...

Edited By : Manjunath H D
Kshetra Samachara

Kshetra Samachara

03/12/2021 01:52 pm

Cinque Terre

27.44 K

Cinque Terre

8

ಸಂಬಂಧಿತ ಸುದ್ದಿ