ಕುಂದಗೋಳ : ಅಕಾಲಿಕ ಮಳೆಯ ಹೊಡೆತಕ್ಕೆ ಕೃಷಿ ಭೂಮಿ ನಾಶವಾಗಿ ರೈತರು ಬದುಕು ಅಕ್ಷರಶಃ ನಲುಗಿ ಹೋಗಿದೆ. ಇದರ ನಡುವೆ ಟೊಮೆಟೊ ಬೆಲೆ ಅರವತ್ತು, ಎಪ್ಪತ್ತು, ಎಂಬತ್ತು ರೂಪಾಯಿ ಬೆಲೆ ತಲುಪಿದ್ದರ ಬಗ್ಗೆ ಈಗ ಎಲ್ಲೇ ಇದೆ ಚರ್ಚೆ, ಸೋಷಿಯಲ್ ಮೀಡಿಯಾಗಳಲ್ಲಿ ಮೆಮ್ಸ್ ಹಾವಳಿ ಎದ್ದಿದೆ.
ನಿತ್ಯದ ಅಡುಗೆಯಲ್ಲಿ ಟೊಮೆಟೊ ಇಲ್ಲಾ ಅಂದ್ರೇ ನಡೆಯೊಲ್ಲಾ ಆದ್ರೇ, ಇದೇ ಪ್ರತಿ ಬುಧವಾರ ಕುಂದಗೋಳ ಪಟ್ಟಣದಲ್ಲಿ ನಡೆಯುವ ಸಂತೆಗೆ ತರಕಾರಿ ಮಾರಲು ಬಂದ ರೈತರನ್ನು ಕೇಳಿದ್ರೇ ಆ ಪರಿಸ್ಥಿತಿಯೆ ಬೇರೆ ಇದೆ.
ಅಕಾಲಿಕ ಮಳೆಯ ನಡುವೆ ರೈತ ತಾನು ಬೆಳೆದ ಬೆಳೆಯಲ್ಲಿ ಅರ್ಧ ಬೆಳೆ ನಾಶವಾಗಿ ಇನ್ನರ್ಧ ಬೆಳೆಯಲ್ಲಿ ಹುಳುಕು ಹೊಲಸು ತೆಗೆದು ಮಾರುಕಟ್ಟೆಗೆ ಬಂದ ಟೊಮೆಟೊ ನೋಡಿ ಬೆಲೆ ಕೇಳಿ ಹೋಗುವವರೆ ಹೆಚ್ಚಾಗಿದ್ದಾರೆ. ಇನ್ನೂ ಟೊಮೆಟೊ ಕೊಳ್ಳಲು ಬಂದ ಕೆಲವರು ಕೇವಲ ಅರ್ಧ ಕೆಜಿ ಮಾತ್ರ ಟೊಮೊಟೊ ಖರೀದಿ ಮಾಡುತ್ತಿದ್ರೇ, ಕೆಲ ಟೊಮೊಟೊ ಮಾರಾಟದ ರೈತರಿಗೆ ಗ್ರಾಹಕರ ಬರ ಸಹ ಎದುರಾಗಿದೆ.
ಈ ಬಗ್ಗೆ ಸ್ವತಃ ಟೊಮೆಟೊ ಬೆಳೆದು ಸಂತೆಗೆ ತಂದ ರೈತರು ಅಭಿಪ್ರಾಯ ಏನಿದೆ ನೀವೆ ಕೇಳಿ.
ಕೇಳಿದ್ರಲ್ಲಾ, ಈ ಹಿಂದೆ ಟೊಮೊಟೊ ಹತ್ತು ರೂಪಾಯಿಗೆ ಕೆಜಿ ಮಾರಾಟ ಮಾಡಿ ಹೋದ ರೈತರು. ಸ್ವಾಮಿ ಈಗ ಬೆಲೆ ಏರಿದೆ ಟೊಮೊಟೊ ಮಾರೋಣ ಎಂದ್ರೇ ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಬೆಳೆ ಹೊಲದಲ್ಲೇ ಕೊಳೆತಿದೆ ಎನ್ನುತ್ತಿದ್ದಾರೆ.
ಒಟ್ಟಾರೆ ಟೊಮೊಟೊ ಬೆಲೆ ಖರೀದಿ ಮಾಡೋ ಗ್ರಾಹಕನಿಗೂ ಮಾರೋ ರೈತನಿಗೂ ಸಂತೃಪ್ತಿ ತರಲಿ.
-ಶ್ರೀಧರ ಪೂಜಾರ ಪಬ್ಲಿಕ್ ನೆಕ್ಸ್ಟ್
Kshetra Samachara
25/11/2021 09:02 am